ಕೊಡಗು-ಮೈಸೂರು ಕ್ಷೇತ್ರದಿಂದ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ? ಪ್ರತಾಪ್ ಸಿಂಹ ರನೌಟ್?

ಕೊಡಗು-ಮೈಸೂರು ಕ್ಷೇತ್ರದಿಂದ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ? ಪ್ರತಾಪ್ ಸಿಂಹ ರನೌಟ್?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 09, 2024 | 4:01 PM

ಹಾಗೆಯೇ ಪತ್ರಕರ್ತರೊಬ್ಬರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರನ್ನು ಎನ್ ಡಿ ಎ ಅಭ್ಯರ್ಥಿಯಾಗಿಸುತ್ತೀರಾ ಅಂತ ಪದೇಪದೆ ಕೇಳಿದರೂ ವಿಜಯೇಂದ್ರ ಆ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರು. ಒಟ್ಟಿನಲ್ಲಿ, ಅವರ ಅರ್ಧಂಬರ್ಧ ಮಾತುಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ; ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಸಿಗೋದು ಕಷ್ಟ.

ಬೆಂಗಳೂರು: ಕೊಡಗು-ಮೈಸೂರು ಕ್ಷೇತ್ರದಿಂದ ಈ ಬಾರಿ ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಟಿಕೆಟ್ ಸಿಗಲಾರದೇ? ಇವತ್ತು ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಇಂದು ಬೆಂಗಳೂರಲ್ಲಿ ಒಗಟಿನ ರೂಪದಲ್ಲಿ ಆಡಿದ ಮಾತು ಕೇಳಿದವರಿಗೆ ಆ ಅನುಮಾನ ಹುಟ್ಟಿರುವ ಸಾಧ್ಯತೆ ಇದೆ. ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡದ ಅವರು ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆಯನ್ನು ಬಹಿರಂಗಗೊಳಿಸಲಾಗಲ್ಲ ಎಂದು ಹೇಳಿದರು. ಮೈಸೂರು ಕ್ಷೇತ್ರದಿಂದ ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ತ ಒಡೆಯರ್ (Yaduveer Krishna Dutt Wodeyar) ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯೋಚನೆ ಇದೆಯಾ ಅಂತ ಕೇಳಿದ ಪ್ರಶ್ನೆಗೆ ವಿಜಯೇಂದ್ರ ಉತ್ತರ ನೀಡಲಿಲ್ಲ. ಹಾಗೆಯೇ ಪತ್ರಕರ್ತರೊಬ್ಬರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರನ್ನು ಎನ್ ಡಿ ಎ ಅಭ್ಯರ್ಥಿಯಾಗಿಸುತ್ತೀರಾ ಅಂತ ಪದೇಪದೆ ಕೇಳಿದರೂ ವಿಜಯೇಂದ್ರ ಆ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರು. ಒಟ್ಟಿನಲ್ಲಿ, ಅವರ ಅರ್ಧಂಬರ್ಧ ಮಾತುಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ; ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಸಿಗೋದು ಕಷ್ಟ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಕೊಡಗು ರೈಲು ಮಾರ್ಗ ನಿರ್ಮಿಸುತ್ತೇವೆ, ಆದರೆ: ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಇಟ್ಟ ಬೇಡಿಕೆಯೇನು?