ಕೊಡಗು-ಮೈಸೂರು ಕ್ಷೇತ್ರದಿಂದ ಬಿಜೆಪಿ ಸ್ಪರ್ಧಿ ಯಾರಾಗಲಿದ್ದಾರೆ ಅನ್ನೋದು ನಮಗೆ ಸಂಬಂಧಿಸದ ವಿಚಾರ: ಡಿಕೆ ಶಿವಕುಮಾರ್
ಜನರಿಗೆ ಹತ್ತಿರವಾಗಿರುವ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆರಿಸುತ್ತೇವೆ ಅಂತ ಶಿವಕುಮಾರ್ ಯದುವೀರ್ ಅವರನ್ನು ಟಾರ್ಗೆಟ್ ಮಾಡಿ ಹೇಳಿದ್ರಾ ಅಂತ ಅನಿಸುತ್ತದೆ. ಯಾಕೆಂದರೆ, ಯದುವೀರ್ ಅವರ ಸಾರ್ವಜನಿಕ ಬದುಕಿನ ಬಗ್ಗೆ ಜನರಿಗೆ ಗೊತ್ತಿಲ್ಲ. ಅವರು ಸಾಮಾನ್ಯ ಜನರೊಂದಿಗೆ ಇರೋದನ್ನು, ಅವರೊಂದಿಗೆ ಮಾತಾಡುವದನ್ನು ಜನ ನೋಡಿಲ್ಲವೆಂದೇ ಹೇಳಬೇಕು. ದಸರಾ ಸಮಯ ಬಿಟ್ಟರೆ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಯದುವೀರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಬೆಂಗಳೂರು: ಬರುವ ಲೋಕಸಭಾ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಿಂದ (Mysuru-Kodagu constituency) ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲು ಬಿಜೆಪಿ ಗಂಭೀರ ಪ್ರಯತ್ನ ನಡೆಸಿದೆ. ಅವರ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ. ಅವರು ಸ್ಪರ್ಧಿಸುವ ನಿರ್ಧಾರ ಮಾಡಿದರೆ ಹೇಗೆ ಅಂತ ಇಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಕೇಳಿದಾಗ ಅವರು ಅದಕ್ಕೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲವೆನ್ನುವ ರೀತಿಯಲ್ಲಿ ಮಾತಾಡಿದರು. ಅವರು (ಬಿಜೆಪಿ) ಯಾರನ್ನು ಣಕ್ಕಿಳಿಸುತ್ತಾರೆ ಅನ್ನೋದು ತಮಗೆ ಸಂಬಂಧಿಸಿದ ವಿಷಯವಲ್ಲ, ಎದುರಾಳಿ ಯಾರೇ ಆದರೂ ಚಿಂತೆಯಿಲ್ಲ, ತಾವು ತಮ್ಮ ಅಭ್ಯರ್ಥಿ ಮತ್ತು ಕಾರ್ಯಕ್ರಮಗಳೊಂದಿಗೆ ಜನರಲ್ಲಿಗೆ ಹೋಗುವುದಾಗಿ ಶಿವಕುಮಾರ್ ಹೇಳಿದರು. ಜನರಿಗೆ ಹತ್ತಿರವಾಗಿರುವ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆರಿಸುತ್ತೇವೆ ಅಂತ ಶಿವಕುಮಾರ್ ಯದುವೀರ್ ಅವರನ್ನು ಟಾರ್ಗೆಟ್ ಮಾಡಿ ಹೇಳಿದ್ರಾ ಅಂತ ಅನಿಸುತ್ತದೆ. ಯಾಕೆಂದರೆ, ಯದುವೀರ್ ಅವರ ಸಾರ್ವಜನಿಕ ಬದುಕಿನ ಬಗ್ಗೆ ಜನರಿಗೆ ಗೊತ್ತಿಲ್ಲ. ಅವರು ಸಾಮಾನ್ಯ ಜನರೊಂದಿಗೆ ಇರೋದನ್ನು, ಅವರೊಂದಿಗೆ ಮಾತಾಡುವದನ್ನು ಜನ ನೋಡಿಲ್ಲವೆಂದೇ ಹೇಳಬೇಕು. ದಸರಾ ಸಮಯ ಬಿಟ್ಟರೆ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಯದುವೀರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ಸೌಭಾಗ್ಯ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್