ರಾಮನಗರ: ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಬರ್ತಿದ್ದಂತೆ ಗಲ್ಲ ಸವರಿ ತಬ್ಬಿಕೊಂಡ ತಾಯಂದಿರು-ಇಲ್ಲಿದೆ ವಿಡಿಯೋ
ಇಂದು(ಮಾ.02) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(Channapatana)ದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರನ್ನು ಸಮಾವೇಶಕ್ಕೆ ಬಂದಿದ್ದ ತಾಯಂದಿರು ಗಲ್ಲ ಸವರಿ ತಬ್ಬಿಕೊಂಡು ಆರ್ಶಿವದಿಸಿದರು.
ರಾಮನಗರ, ಮಾ.02: ಗ್ಯಾರಂಟಿ ಯೋಜನೆಗಳ ಬೃಹತ್ ಸಮಾವೇಶವನ್ನು ಇಂದು(ಮಾ.02) ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(Channapatana)ದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರನ್ನು ಸಮಾವೇಶಕ್ಕೆ ಬಂದಿದ್ದ ತಾಯಂದಿರು ಗಲ್ಲ ಸವರಿ ತಬ್ಬಿಕೊಂಡು ಆರ್ಶಿವದಿಸಿದರು. ಡಿಸಿಎಂಗೆ ಎಂಎಲ್ಸಿ ಪುಟ್ಟಣ್ಣ ಸಾಥ್ ನೀಡಿದರು. ಇನ್ನು ಈ ವೇಳೆ ಮಾತನಾಡಿದ ಅವರು, ‘ ನನಗೂ ಒಂದ್ ಕಾಲದಲ್ಲಿ ಚನ್ನಪಟ್ಟಣ ಅಸೆಂಬ್ಲಿ ನಿಲ್ಲುವ ಆಸೆ ಇತ್ತು. ರಾಜಕಾರಣದಲ್ಲಿ ಯಾವ ಸಂದರ್ಭ ಬರುತ್ತೋ ನನಗೆ ಗೊತ್ತಿಲ್ಲ. ಚನ್ನಪಟ್ಟಣ ಮತದಾರರಿಗೆ ಮನವಿ ಮಾಡ್ಕೋತಿನಿ, ಯಾವ್ಯಾವ ಸಂದರ್ಭದಲ್ಲಿ ಯಾರು ಏನೇನ್ ಮಾತಾಡಿದ್ದಾರೆ ಎಂದು ದಾಖಲೆ ಇದೆ. ಚನ್ನಪಟ್ಟಣ ರಾಮನಗರ ದ ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಹೇಳುತ್ತೇನೆ. ನಿಮ್ಮ ವಯಸ್ಸು ಹಿಂದೆ ಹೋಗಲ್ಲ,ಮುಂದಕ್ಕೆ ಹೋಯ್ತಾ ಇರ್ತದೆ. ಹತ್ತು ವರ್ಷ ನಮ್ಮ ಸರ್ಕಾರ ಇದ್ದೇ ಇರುತ್ತದೆ. ನನಗಷ್ಟೂ ಭರವಸೆ ಇದೆ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ