ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇರ ಹೊಣೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಕಳೆದ 10-ವರ್ಷ ಅವಧಿಯ ಭಯೋತ್ಪಾದಕ ಕೃತ್ಯ ಮತ್ತು ಚಟುವಟಿಕೆಗಳ ಗ್ರಾಫ್ ಗಮನಿಸಿದರೆ ದೇಶದ ಎಲ್ಲ ಭಾಗಗಳಲ್ಲಿ ಶೇಕಡಾ 90 ರಷ್ಟು ಕಡಿಮೆಯಾಗಿದೆ, ಆದರೆ ಕರ್ನಾಟಕಲ್ಲಿ ಕಡಿಮೆಯಾಗಿಲ್ಲ, ಇದಕ್ಕೆ ಸಿದ್ದರಾಮಯ್ಯನವರ ನಾನ್ಸೆನ್ಸ್ ಅಪ್ರೋಚ್ ಬಿಟ್ಟು ಬೇರೇನೂ ಕಾರಣವಲ್ಲ ಎಂದು ಜೋಶಿ ಹೇಳಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇರ ಹೊಣೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
|

Updated on: Mar 02, 2024 | 4:38 PM

ಹುಬ್ಬಳ್ಳಿ: ಕೇವಲ ಕ್ಷುಲ್ಲಕ ವೋಟ್ ಬ್ಯಾಂಕ್ ಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ (Islamic fundamentalists) ರಕ್ಷಣೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು ಉಗ್ರವಾದಿಗಳಿಗೆ ಕರ್ನಾಟಕ ಕ್ರಮೇಣ ಸುರಕ್ಷಿತ ಅಡಗುದಾಣವಾಗಿ ಪರಿಣಮಿಸಿದೆ ಎಂದು ಹೇಳಿದ ಜೋಶಿ ಕಳೆದ 10-ವರ್ಷ ಅವಧಿಯ ಭಯೋತ್ಪಾದಕ ಕೃತ್ಯ ಮತ್ತು ಚಟುವಟಿಕೆಗಳ ಗ್ರಾಫ್ ಗಮನಿಸಿದರೆ ದೇಶದ ಎಲ್ಲ ಭಾಗಗಳಲ್ಲಿ ಶೇಕಡಾ 90 ರಷ್ಟು ಕಡಿಮೆಯಾಗಿದೆ, ಆದರೆ ಕರ್ನಾಟಕಲ್ಲಿ ಕಡಿಮೆಯಾಗಿಲ್ಲ, ಇದಕ್ಕೆ ಸಿದ್ದರಾಮಯ್ಯನವರ ನಾನ್ಸೆನ್ಸ್ ಅಪ್ರೋಚ್ ಬಿಟ್ಟು ಬೇರೇನೂ ಕಾರಣವಲ್ಲ ಎಂದರು. ಶುಕ್ರವಾರ ಬೆಂಗಳೂರುಗೆ ಹೋಗಿ ಗಾಯಾಳುಗಳನ್ನು ಭೇಟಿಯಾಗಿದ್ದೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಒಬ್ಬ ಮಹಿಳೆ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ, ಹಾಗಾಗದಿರಲಿ ಅಂತ ಭಗವಂತನನ್ನು ಪ್ರಾರ್ಥಸುವುದಾಗಿ ಅವರು ಹೇಳಿದರು.

ಇಂಥ ಘಟನೆಗಳು ನಡೆದಾಗ ರಾಜ್ಯ ಸರ್ಕಾರದ ಹೇಳಿಕೆಗಳು ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕುಮ್ಮಕ್ಕು ನೀಡುವಂತಿರುತ್ತವೆ ನಾವೇನೇ ಮಾಡಿದರೂ ರಕ್ಷಣೆ ಸಿಗುತ್ತದೆ ಎಂಬ ನಿರಾಳ ಭಾವ ಅವರಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಿದ ಜೋಶಿ ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಘಟನೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇರವಾಗಿ ಹೊಣೆಗಾರರು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭೆ ಚುನಾವಣೆ: ಕರ್ನಾಟಕದಿಂದ ಜೈಶಂಕರ್, ನಿರ್ಮಲಾ ಸೀತಾರಾಮನ್ ಸ್ಪರ್ಧೆ ಸಾಧ್ಯತೆ: ಪ್ರಲ್ಹಾದ್ ಜೋಶಿ

Follow us