ಡಿಕೆ ಸುರೇಶ್ ಮೆಂಬರ್ ಆಫ್ ಪಾರ್ಲಿಮೆಂಟ್ ಅಲ್ಲ, ಮೆಂಬರ್ ಆಫ್ ಪಂಚಾಯತ್: ಡಿಕೆ ಶಿವಕುಮಾರ್
ಸುರೇಶ್ ಮೆಂಬರ್ ಅಫ್ ಪಾರ್ಲಿಮೆಂಟ್ ಅಲ್ಲ ಅವರು ಮೆಂಬರ್ ಆಫ್ ಪಂಚಾಯತ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಎಲ್ಲ ಪಂಚಾಯತ್ ಗಳಿಗೆ ಅವರು ಭೇಟಿ ನೀಡುತ್ತಿರುತ್ತಾರೆ ಜನರ ಕಷ್ಟ ಸುಖ ವಿಚಾರಿಸುತ್ತಿರುತ್ತಾರೆ. ಹಿಂದೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ದೇವಗೌಡ ಈ ಕ್ಷೇತ್ರದ ಎಂಪಿಗಳಾಗಿದ್ದರು, ಅವರೇನಾದರೂ ಪಂಚಾಯತ್ ಗಳಿಗೆ ಭೇಟಿ ನೀಡಿದ್ರಾ? ಎಂದು ಶಿವಕುಮಾರ್ ಪ್ರಶ್ನಿಸಿದರು
ರಾಮನಗರ: ತಮ್ಮ ಸಹೋದರ ಡಿಕೆ ಸುರೇಶ್ (DK Suresh) ಬಗ್ಗೆ ಡಿಕೆ ಶಿವಕುಮಾರ್ (DK Shivakumar) ಯಾವಾಗಲೂ ಬಹಳ ಅಭಿಮಾನ ಮತ್ತು ಪ್ರೀತಿಯಿಂದ ಮಾತಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha polls) ಸುರೇಶ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆ ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವುದನ್ನು ಶಿವಕುಮಾರ್ ಅವರಿಗೆ ಹೇಳಿದಾಗ, ಸುರೇಶ್ ಮೆಂಬರ್ ಅಫ್ ಪಾರ್ಲಿಮೆಂಟ್ ಅಲ್ಲ ಅವರು ಮೆಂಬರ್ ಆಫ್ ಪಂಚಾಯತ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಎಲ್ಲ ಪಂಚಾಯತ್ ಗಳಿಗೆ ಅವರು ಭೇಟಿ ನೀಡುತ್ತಿರುತ್ತಾರೆ ಜನರ ಕಷ್ಟ ಸುಖ ವಿಚಾರಿಸುತ್ತಿರುತ್ತಾರೆ. ಹಿಂದೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ ಡಿ ದೇವಗೌಡ ಈ ಕ್ಷೇತ್ರದ ಎಂಪಿಗಳಾಗಿದ್ದರು, ಅವರೇನಾದರೂ ಪಂಚಾಯತ್ ಗಳಿಗೆ ಭೇಟಿ ನೀಡಿದ್ರಾ? ಸಂಸತ್ತಿನಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಏಕೈಕ ಅಭ್ಯರ್ಥಿಯಾಗಿದ್ದರೂ ಯಾವತ್ತೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಹಾಗೆ ಸುರೇಶ್ ನಡೆದಿಕೊಂಡಿಲ್ಲ ಎಂದು ಶಿವಕುಮಾರ್ ಹೇಳಿದರು.
ನನ್ನ ಸಹೋದರ ಅನ್ನೋ ವಿಷಯ ಪಕ್ಕಕ್ಕಿಡಿ, ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ದಳದ ಅಭ್ಯರ್ಥಿಯಾಗಿ ನನ್ನ ಸಹೋದರಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದಾಗ ಆರ್ ಆಶೋಕ ಅವರು ಅನಿತಾ ಅವರ ಪರ ಭಾರೀ ಪ್ರಚಾರ ಮಾಡಿದ್ದರೂ ಸುರೇಶ್ 1,37,000 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಈ ಭಾಗದ ತಾಯಂದಿರು ಸುರೇಶ್ ಕೈ ಹಿಡಿಯುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಮ್ಮ ಗ್ಯಾರೆಂಟಿ ಅಲ್ಲಾಡಿಸೋಕೆ ಯಾರಿಂದಲೂ ಸಾಧ್ಯ ಇಲ್ಲ: ಜನರಿಗೆ ಡಿಕೆ ಸುರೇಶ್ ಗ್ಯಾರಂಟಿ