ನಿಮ್ಮ ಗ್ಯಾರೆಂಟಿ ಅಲ್ಲಾಡಿಸೋಕೆ ಯಾರಿಂದಲೂ ಸಾಧ್ಯ ಇಲ್ಲ: ಜನರಿಗೆ ಡಿಕೆ ಸುರೇಶ್ ಗ್ಯಾರಂಟಿ
ರಾಮನಗರದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ ಗೃಹಲಕ್ಷ್ಮಿ ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್, ‘ತಾಯಂದಿರ ಹೆಸರಿನಲ್ಲಿ ಈ ಸರ್ಕಾರ ಬಂದಿದೆ. ಈ ಹಿನ್ನಲೆಯಲ್ಲೇ ಯೋಜನೆಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಎಂದು ಹೆಸರಿಟ್ಟಿದ್ದೇವೆ. ನಾವು ಈ ಹಿಂದೆ ಯಾವ 40% ಹಣದ ಬಗ್ಗೆ ಆರೋಪ ಮಾಡಿದ್ದೇವೂ, ಅದೇ ಹಣದಿಂದಲೇ ಐದು ಗ್ಯಾರೆಂಟಿ ಅನುಷ್ಠಾನ ಮಾಡಿದ್ದೇವೆ ಎಂದರು.
ರಾಮನಗರ, ಫೆ.25: ಯಾರು ಏನೇ ಹೇಳಿದರೂ, ನಿಮ್ಮ ಗ್ಯಾರೆಂಟಿ ಅಲ್ಲಾಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಡಿಕೆ ಸುರೇಶ್ (D.K Suresh) ಹೇಳಿದರು. ರಾಮನಗರದಲ್ಲಿ ಹಮ್ಮಿಕೊಂಡಿರುವ ಮಹಿಳೆಯರ ಗೃಹಲಕ್ಷ್ಮಿ ಸಮಾವೇಶದಲ್ಲಿ ಮಾತನಾಡಿದ ಅವರು, ತಾಯಂದಿರ ಹೆಸರಿನಲ್ಲಿ ಈ ಸರ್ಕಾರ ಬಂದಿದೆ. ಈ ಹಿನ್ನಲೆಯಲ್ಲೇ ಯೋಜನೆಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಎಂದು ಹೆಸರಿಟ್ಟಿದ್ದೇವೆ. ಈಗಾಗಲೇ ಕಾಂಗ್ರೆಸ್ಗೆ ಶಕ್ತಿ ತುಂಬಿದ್ದೀರಿ. ಆದರೆ, ಇದರ ಮುಂದೆ ಬಹಳ ದೊಡ್ಡ ಸವಾಲಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖಂಡರು, ನಾವು ಐದು ಗ್ಯಾರೆಂಟಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವು. ಕೆಲವರು ಟೀಕೆ ಮಾಡಿದ್ರು, ಕೆಲವರು ಪ್ರಶ್ನೆ ಮಾಡಿದ್ದರು, ಆದರೆ ತಮ್ಮ ಆಶಿರ್ವಾದದಿಂದ ಐದು ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಆದರೂ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ನಾವು ಈ ಹಿಂದೆ ಯಾವ 40% ಹಣದ ಬಗ್ಗೆ ಆರೋಪ ಮಾಡಿದ್ದೇವೂ, ಅದೇ ಹಣದಿಂದಲೇ ಐದು ಗ್ಯಾರೆಂಟಿ ಅನುಷ್ಠಾನ ಮಾಡಿದ್ದೇವೆ. 40 ಕಮಿಷನ್ನನ್ನು ಈ ರಾಜ್ಯದ ರೈತರಿಗೆ, ಮಹಿಳೆಯರಿಗೆ ಕೊಡೊದಕ್ಕೆ ಸಾಧ್ಯ ಆಗುತ್ತಿದೆ. ಯಾವ ಭ್ರಷ್ಟಾಚಾರ ಮಾಡ್ತಾ ಇದ್ರಿ, ಅದನ್ನು ತಪ್ಪಿಸಿ ರಾಜ್ಯದ ಮಹಿಳೆಯರಿಗೆ ಐದು ಗ್ಯಾರೆಂಟಿ ಕೊಟ್ಟಿದ್ದೇವೆ. ಒಬ್ಬರೆ, ಒಬ್ಬರಾದರೂ ಅರ್ಜಿ ಹಾಕಲಿಕ್ಕೆ ಹಣ ಕೊಡಿ ಎಂದು ಕೇಳಿದ್ದೀವಾ ಎಂದರು.
ಇದನ್ನೂ ಓದಿ:ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿ ಮಹಿಳೆಯರಿಗೆ; ಪುರುಷರಿಗೆ ಯಾಕೆ ಇಲ್ಲ-ವಾಟಾಳ್
ಇನ್ನು ರಾಮನಗರ ಜಿಲ್ಲೆಯಲ್ಲಿ 96% ರಷ್ಟು ಐದು ಗ್ಯಾರೆಂಟಿ ಅನುಷ್ಟಾನ ಮಾಡಿದ್ದೇವೆ. ಜಾತಿ, ಧರ್ಮ ಯಾವುದೂ ಗೊತ್ತಿಲ್ಲದೇ, ಬಿಪಿಎಲ್ ಕಾರ್ಡ್ ಇರುವವರಿಗೆ ಎಲ್ಲಿರಿಗೂ ಹಣ ಬರುತ್ತಿದೆ. ಕುಮಾರಸ್ವಾಮಿ ಇಲ್ಲೇ ಎಲ್ಲೋ ಇದ್ದಾರೆ, ಅವರು ಹೇಳುತ್ತಿದ್ದರೂ ಕಾಂಗ್ರೆಸ್ನವರು ಏನ್ ಏನ್ ಮಾಡಿದ್ರು ಅಂತ, ಸ್ತ್ರೀ ಶಕ್ತಿ ಗುಂಪುಗಳನ್ನು ಮಾಡಿದ್ದೇ ಕಾಂಗ್ರೆಸ್, ಮೋಟಮ್ಮ ಇರುವಾಗ ಎಸ್ಎಮ್ ಕೃಷ್ಣ ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ಮಾಡಿದ್ದ ಕಾರ್ಯಕ್ರಮ ಇದಾಗಿತ್ತು. ಇವತ್ತು ಬ್ಯಾಂಕುಗಳ ಲಕ್ಷಾನುಗಟ್ಟಲೆ ಸಾಲ ಕೊಡೊದಕ್ಕೆ ತಯಾರಿದೆ. ಮನೆ ಬಾಗಿಲಿಗೆ ಬಂದು ಬ್ಯಾಂಕುಗಳು ನಿಲ್ಲುತ್ತಿವೆ. ಇದು ಜನಾತದಳ, ಬಿಜೆಪಿ ಕಾರ್ಯಕ್ರಮ ಅಲ್ಲ, ಗೃಹಲಕ್ಷ್ಮಿ ಇರುವವರೆಗೂ ಈ ಸರ್ಕಾರ ಸುಭದ್ರವಾಗಿರುತ್ತೆ.
ಬರ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಕಾವೇರಿ ನೀರು ಕೊಡ್ತೇವೆ
‘ಬರ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಬಿಡದಿ, ಕೂಟಗಲ್, ಸೇರಿದಂತೆ ಪ್ರತಿ ಹಳ್ಳಿಗೂ ಕಾವೇರಿ ನೀರು ಕೊಡುತ್ತೇವೆ. ಮೆಟ್ರೋ ಟೆಂಡರ್ಗೆ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಬಿಡದಿಯನ್ನು ಕೂಡ ಗ್ರೇಟರ್ ಬೆಂಗಳೂರು ಮಾಡಲಾಗುತ್ತೆ, ನೀವೆಲ್ಲರೂ ಗ್ರೇಟರ್ ಬೆಂಗಳೂರಿನವರು, ಇವೆಲ್ಲವನ್ನೂ ಡಿಕೆ ಶಿವಕುಮಾರ್ ಮಾಡಿದ್ದು, ತೋಟದಲ್ಲಿ ಕೂತವರು ಮಾಡಿದ್ದಲ್ಲ. ಟೀಕೆಗಳನ್ನು ಸಾವಿರ ಮಾಡುತ್ತಾರೆ. ಈಶ್ವರಪ್ಪನವರು ಡಿಕೆ ಸುರೇಶ್ಗೆ ಗುಂಡಿಕ್ಕಿ ಕೊಲ್ಲಿ, ರಾಷ್ಟ್ರದ್ರೋಹ ಮಾಡಿದ್ದಾನೆ ಅಂತಾರೆ, ಆದರೆ, ನಾನು ನನಗಾಗಿ ಏನೂ ಕೇಳಲಿಲ್ಲ. ರಾಜ್ಯಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ. ಜಿಎಸ್ಟಿ ಬೇಡ ಎಂದಿದ್ದೇವು, ನಮಗೆಲ್ಲ ಹೊರಗೆ ಹಾಕಿ ಜಿಎಎಸ್ಟಿ ತಂದರು.
ನಮ್ಮಲ್ಲಿಂದ 13 ಸಾವಿರ ಕೋಟಿ ಹಣವನ್ನು ಕಿತ್ತುಕೊಳ್ಳುತ್ತಾ ಇದೆ. ಉತ್ತರ ಪ್ರದೇಶವರು, ಪ್ರಧಾನಿ ಕ್ಷೇತ್ರದವರು ಎರಡುವರೆ ಸಾವಿರ ಕೋಟಿ ಕಟ್ಟುತ್ತಿದ್ದಾರೆ. ಅವರು ಎರಡುವರೆ ಸಾವಿರ ಕೋಟಿ ಕಟ್ಟೋದಂತೆ, ನಾವು ಹದಿಮೂರು ಸಾವಿರ ಕೋಟಿ ಕಟ್ಟೊದಂತೆ. ಜೊತೆಗೆ ನಮ್ಮ ತೆರಿಗೆ ಹಣವನ್ನ ಉತ್ತರ ಭಾರತಕ್ಕೆ ಹಾಕುತ್ತಾರಂತೆ. ನಮ್ಮ ಬಜೆಟ್ಗಿಂತ ಹೆಚ್ಚು ಹಣವನ್ನು ಅವರಿಗೆ ಕೊಡುತ್ತೇವೆ. ಗ್ಯಾಸ್ಲ್ಲಿ 600, ಪೆಟ್ರೋಲ್ಗೆ 50 ರೂಪಾಯಿಯನ್ನು ಕೇಂದ್ರಕ್ಕೆ ಕೊಡುತ್ತೇವೆ. ಇದನ್ನು ಕೇಳಿದ್ರೆ, ಈಶ್ವರಪ್ಪನವರು ಗುಂಡಿಕ್ಕಿ ಕೊಲ್ತಾರಂತೆ. ಅದಕ್ಕೆ ನಾನೇ ಬರ್ತೀನಿ ಅಂದಿದ್ದೆ, ಅವರು ಈ ಕಡೆ ಬಂದೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ