ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ಸೌಭಾಗ್ಯ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೊದಲಿನಿಂದಲೂ ಕಾಶಿ, ಮಥುರಾದಂತೆ ಒಂದು ಧಾರ್ಮಿಕ ಕ್ಷೇತ್ರ ಎನಿಸಿಕೊಂಡ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರುವುದು ತನ್ನ ಸೌಭಾಗ್ಯವಲ್ಲದೆ ಮತ್ತೇನೂ ಅಲ್ಲ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳುತ್ತಾರೆ.
ಮೈಸೂರು: ಇಡೀ ದೇಶವೇ ಕಾತರದಿಂದ ಎದುರುನೋಡುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠೆಯ (Ram temple consecration ceremony) ದಿನ ಹತ್ತಿರವಾಗುತ್ತಿದೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಹಿಂದಿನ ಮೈಸೂರು ಒಡೆಯರ್ (Mysuru Wodeyar dynasty) ಅರಸೊತ್ತಿಗೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wodeyar) ಅವರಿಗೆ ಸಿಕ್ಕಿದ್ದು ಅವರು ಅಯೋಧ್ಯೆಗೆ ತೆರಳಲಿದ್ದಾರೆ. ಇಂದು ನಗರದಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ತಮ್ಮ ಸಂತಸ ಹಂಚಿಕೊಂಡ ಯದುವೀರ್, 500 ವರ್ಷಗಳ ನಂತರ ರಾಮಮಂದಿರ ನಿರ್ಮಾಣವಾಗಿ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿರುವುದು ಇಡೀ ನಾಡಿಗೆ ಸಂತಸ ಮತ್ತು ಸಂಭ್ರಮದ ವಿಷಯವಾಗಿದೆ, ಇದು ನಿಜಕ್ಕೂ ಎಲ್ಲ ಭಾರತೀಯರಿಗೆ ಐತಿಹಾಸಿಕ ಕ್ಷಣ ಎಂದರು. ಪ್ರತಿಷ್ಠಾಪನೆಗೆ ಮೈಸೂರಿನವರೇ ಆಗಿರುವ ಅರುಣ್ ಯೋಗಿರಾಜ್ ಕೆತ್ತಿರುವ ಬಾಲ ರಾಮನ ಮೂರ್ತಿ ಆಯ್ಕೆಯಾಗಿರೋದು ಹೆಮ್ಮೆಯ ವಿಷಯ. ಇನ್ನೂ ಬೇರೆ ಬೇರೆ ವಿಗ್ರಹಗಳನ್ನು ಕೆತ್ತಿ ನಾಡಿನಾದ್ಯಂತ ಖ್ಯಾತಿ ಗಳಿಸಿರುವ ಅರುಣ್ ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು ಎಂದು ಯದುವೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ