Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ಪ್ರಾಣ ಪ್ರತಿಷ್ಠೆಯಂದು ಪ್ರಧಾನಿ ಮೋದಿ ಇಡೀ ದಿನ ಉಪವಾಸ, ಸರಯೂ ನದಿಯಲ್ಲಿ ಸ್ನಾನ

ಅಯೋಧ್ಯೆ(Ayodhya)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಜನವರಿ 22 ರಂದು ನಡೆಯಲಿದ್ದು ಅಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಉಪವಾಸ ವ್ರತ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರದ ವಿಗ್ರಹವನ್ನೂ ಆಯ್ಕೆ ಮಾಡಲಾಗಿದೆ. ಜನವರಿ 22 ರಂದು ನಡೆಯಲಿರುವ ಈ ಮಹಾಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕೂಡ ಅಯೋಧ್ಯೆಗೆ ಆಗಮಿಸುತ್ತಿದ್ದು, ಈ ದಿನ ಉಪವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ರಾಮಮಂದಿರ ಪ್ರಾಣ ಪ್ರತಿಷ್ಠೆಯಂದು ಪ್ರಧಾನಿ ಮೋದಿ ಇಡೀ ದಿನ ಉಪವಾಸ, ಸರಯೂ ನದಿಯಲ್ಲಿ ಸ್ನಾನ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on: Jan 03, 2024 | 12:46 PM

ಅಯೋಧ್ಯೆ(Ayodhya)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರ(Ram Mandir)ದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಜನವರಿ 22 ರಂದು ನಡೆಯಲಿದ್ದು ಅಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಉಪವಾಸ ವ್ರತ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರದ ವಿಗ್ರಹವನ್ನೂ ಆಯ್ಕೆ ಮಾಡಲಾಗಿದೆ. ಜನವರಿ 22 ರಂದು ನಡೆಯಲಿರುವ ಈ ಮಹಾಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕೂಡ ಅಯೋಧ್ಯೆಗೆ ಆಗಮಿಸುತ್ತಿದ್ದು, ಈ ದಿನ ಉಪವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು ಜನವರಿ 16 ರಂದು ಪ್ರಧಾನಿ ಮೋದಿಯವರ ಸಂಕಲ್ಪ ಅಕ್ಷತೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ. ಅಕ್ಷತೆ ಬಂದ ನಂತರ 7 ದಿನಗಳ ಆಚರಣೆ ಪ್ರಾರಂಭವಾಗುತ್ತದೆ. ಇದೇ ವೇಳೆ ನಾಲ್ಕು ವೇದಗಳಲ್ಲಿ ಭಕ್ತಿ, ಯಾಗ ನಡೆಯುತ್ತಿದೆ. ಜನವರಿ 15ರವರೆಗೆ ವೈದಿಕರು ಈ ಯಾಗವನ್ನು ನಡೆಸಲಿದ್ದಾರೆ.

ಪ್ರಧಾನಿ ಮೋದಿ ಉಪವಾಸವಿದ್ದುಕೊಂಡೇ ಎಲ್ಲಾ ಧಾರ್ಮಿಕ ಆಚರಣೆಯನ್ನು ಪೂರ್ಣಗೊಳಿಸಬೇಕು, ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುವುದರಿಂದ ಇಡೀ ದಿನ ಉಪವಾಸವಿರಬೇಕಾಗುತ್ತದೆ. ಅಷ್ಟೇ ಅಲ್ಲದೆ ಮೋದಿ ಪವಿತ್ರ ನದಿಯಲ್ಲಿ ಸ್ನಾನವನ್ನೂ ಕೂಡ ಮಾಡಬೇಕಾಗುತ್ತದೆ ಎಂದು ಮಹಂತ್ ಮಿಥಿಲೇಶ್​ ಹೇಳಿದ್ದಾರೆ.

ಹಾಗಾಗಿ ಮೋದಿ ಸರಯೂ ನದಿಯಲ್ಲಿ ಸ್ನಾನ ಮಾಡಬಹುದು ಎಂದು ಅಂದಾಜಿಸಲಾಗಿದೆ. 2021ರ ಹಿಂದೆ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಗಂಗಾ ಸ್ನಾನ ಮಾಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಮತ್ತಷ್ಟು ಓದಿ: ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ

ಪ್ರತಿಷ್ಠಾಪನೆ ನಂತರದ 48 ದಿನ, ದೇಶದಾದ್ಯಂತದ ಪ್ರಮುಖ ಯಾತ್ರಾಸ್ಥಳಗಳಿಂದ ತಂದ 1,000 ಕಲಶಗಳ ನೀರಿನಿಂದ ರಾಮಲಾಲಾ ವಿಗ್ರಹಕ್ಕೆ ಅಭಿಷೇಕ ಮಾಡಲಾಗುವುದು. ಇದಲ್ಲದೆ, ಪೂಜೆಯ ಭಾಗವಾಗಿ ದೇವರಿಗೆ ಕುಂಕುಮ, ಕರ್ಪೂರ ಮತ್ತು ಇತರ ಸಾಮಾಗ್ರಿಗಳನ್ನು ಅರ್ಪಿಸಲಾಗುತ್ತದೆ. ಪ್ರತಿಷ್ಠಾಪನೆ ನಂತರದ ಎಲ್ಲಾ ಪೂಜೆಗಳನ್ನು ಕರ್ನಾಟಕದ ಉಡುಪಿ ಪೇಜಾವರ ಮಠದ ಸ್ವಾಮಿಗಳು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ