ಅಯೋಧ್ಯೆಯ ಕರಸೇವಕಪುರಂನಲ್ಲಿ ಅನ್ನದಾಸೋಹದ ಉಸ್ತುವಾರಿವಹಿಸಿಕೊಂಡಿರುವವರೂ ಕನ್ನಡಿಗರು!

ಅಯೋಧ್ಯೆಯ ಕರಸೇವಕಪುರಂನಲ್ಲಿ ಅನ್ನದಾಸೋಹದ ಉಸ್ತುವಾರಿವಹಿಸಿಕೊಂಡಿರುವವರೂ ಕನ್ನಡಿಗರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 19, 2024 | 12:53 PM

ದೇಶದ ನಾನಾಭಾಗ ಮತ್ತು ನೇಪಾಳದಿಂದ ಒಂದು ವರ್ಷಕ್ಕಾಗುವಷ್ಟು ದವಸ ಧಾನ್ಯ ದಾಸೋಹಕ್ಕಾಗಿ ಸಂಗ್ರಹವಾಗಿವೆ. ಪ್ರಾಣ ಪ್ರತಿಷ್ಠೆಯ ನಂತರವೂ ದಾಸೋಹ ಜಾರಿಯಲ್ಲಿರಲಿದೆ ಎಂದು ಲಿಂಗಪ್ಪ ಹೇಳುತ್ತಾರೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಅಗಮಿಸಿರುವ ರಾಮಭಕ್ತ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿಯವರಿಗೆ ಕಳೆದ 15 ದಿನಗಳಿಂದ ಊಟ-ತಿಂಡಿ ಮತ್ತು ಚಹಾಪಾನೀಯದ ವ್ಯವಸ್ಥೆ ಮಾಡಲಾಗುತ್ತಿದೆ.

ಅಯೋಧ್ಯೆ: ಟಿವಿ9 ಕನ್ನಡ ವಾಹಿನಿಯ ವರದಿಗಾರರು ಅಯೋಧ್ಯೆಯ ಕರಸೇವಕಪುರಂನಲ್ಲಿ (Karsevak puram) ಕಳೆದ 15 ದಿನಗಳಿಂದ ಜಾರಿಯಲ್ಲಿರುವ ಅನ್ನದಾಸೋಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಕರಸೇವಕಪುರಂ ಟ್ರಸ್ಟ್ ನಡೆಸುತ್ತಿರುವ ಅನ್ನದಾಸೋಹ ವ್ಯವಸ್ಥೆ ಮೂರು ದಶಕಗಳಿಗಿಂತ (over three decades) ಹೆಚ್ಚು ಸಮಯದಿಂದ ಅಸ್ತಿತ್ವದಲ್ಲಿದೆ. 1992 ರಲ್ಲಿ ಕರಸೇವೆಗೆ ಅಂತ ಅಯೋಧ್ಯೆಗೆ ಬಂದ ರಾಮಭಕ್ತರಿಗೆ (Ram bhakts) ಸಮಯಕ್ಕೆ ಸರಿಯಾಗಿ ಊಟ ಮತ್ತು ತಿಂಡಿ ಒದಗಿಸುವ ದೃಷ್ಟಿಯಿಂದ ಟ್ರಸ್ಟ್ ನವರು ದಾಸೋಹ ಆರಂಭಿಸಿದರಂತೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಅಗಮಿಸಿರುವ ರಾಮಭಕ್ತ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿಯವರಿಗೆ ಕಳೆದ 15 ದಿನಗಳಿಂದ ಊಟ-ತಿಂಡಿ ಮತ್ತು ಚಹಾಪಾನೀಯದ ವ್ಯವಸ್ಥೆ ಮಾಡಲಾಗುತ್ತಿದೆ. ಅವರು ಮಾತ್ರವಲ್ಲದೆ, ಧಾರ್ಮಿಕ ನಗರಿಗೆ ಭೇಟಿ ನೀಡುತ್ತಿರುವ ಭಕ್ತ ಜನರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ನಾವು ಆಗಾಗ ಹೇಳುತ್ತಿರುವ ಹಾಗೆ, ರಾಮಮಂದಿರ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳಲ್ಲಿ ಕನ್ನಡಿಗರ ಕೊಡುಗೆ ಇದೆ. ಕರಸೇವಕಪುರಂ ಅನ್ನದಾಸೋಹ ಕನ್ನಡಿಗ ಆನ ಲಿಂಗಪ್ಪ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಅವರು ಹೇಳುವ ಪ್ರಕಾರ ದೇಶದ ನಾನಾಭಾಗ ಮತ್ತು ನೇಪಾಳದಿಂದ ಒಂದು ವರ್ಷಕ್ಕಾಗುವಷ್ಟು ದವಸ ಧಾನ್ಯ ದಾಸೋಹಕ್ಕಾಗಿ ಸಂಗ್ರಹವಾಗಿವೆ. ಪ್ರಾಣ ಪ್ರತಿಷ್ಠೆಯ ನಂತರವೂ ದಾಸೋಹ ಜಾರಿಯಲ್ಲಿರಲಿದೆ ಎಂದು ಲಿಂಗಪ್ಪ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ