ನಾನು ನಡೆದದ್ದೇ ದಾರಿ; ನಡು ರಸ್ತೆಯಲ್ಲಿ ಓಡಾಡಿ ಜನರನ್ನು ಗಾಬರಿಪಡಿಸಿದ ಕಾಡಾನೆ, ಮುಂದೇನಾಯ್ತು?

ನಾನು ನಡೆದದ್ದೇ ದಾರಿ; ನಡು ರಸ್ತೆಯಲ್ಲಿ ಓಡಾಡಿ ಜನರನ್ನು ಗಾಬರಿಪಡಿಸಿದ ಕಾಡಾನೆ, ಮುಂದೇನಾಯ್ತು?

Gopal AS
| Updated By: ಆಯೇಷಾ ಬಾನು

Updated on: Mar 09, 2024 | 3:15 PM

ಗುಂಪಿನಿಂದ ಬೇರ್ಪಟ್ಟ ಕಾಡಾನೆಯೊಂದು ದಾರಿ ತಪ್ಪಿ ಪೊನ್ನಂಪೇಟೆ ಪಟ್ಟಣಕ್ಕೆ ಬಂದು ಬೀದಿ ಬೀದಿಯಲ್ಲಿ ಓಡಾಡಿದೆ. ಕಾಡಾನೆ ಕಂಡು ಜನರು ಗಾಬರಿಯಾಗಿ ಓಡಾಡಿದ್ದಾರೆ. ರಸ್ತೆಯಲ್ಲಿ ಬರುತ್ತಿದ್ದ ವಾಹನಗಳು ತಕ್ಷಣಕ್ಕೆ ತಿರುವು ತೆಗೆದುಕೊಂಡು ವಾಹನ ಚಾಲಕರು ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಊರಿನಿಂದ ಹೊರಗೆ ಓಡಿಸಿದ್ದಾರೆ.

ಕೊಡಗು, ಮಾರ್ಚ್.09: ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ವಾಕ್ ಮಾಡಿ ಇದ್ದವರನೆಲ್ಲಾ ಗಾಬರಿ ಬೀಳಿಸಿದ ಘಟನೆ ಕೊಡಗಿನಲ್ಲಿ (Kodagu) ನಡೆದಿದೆ. ಇಲ್ಲಿನ ಪೊನ್ನಂಪೇಟೆ ತಾಲ್ಲೂಕು ಕೇಂದ್ರದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ತನ್ನ ಗುಂಪಿನಿಂದ ಬೇರ್ಪಟ್ಟು ದಾರಿ ತಪ್ಪಿ ಪೊನ್ನಂಪೇಟೆ ಪಟ್ಟಣಕ್ಕೆ ಬಂದ ಕಾಡಾನೆ (Elephant) ಎಲ್ಲೆಂದರಲ್ಲಿ ಓಡಾಡಿದೆ. ಇದನ್ನ ನೋಡಿದ ಜನರೂ ಕೂಡ ಬೊಬ್ಬೆ ಹೊಡೆದು ಅದನ್ನ ಕೆರಳಿಸಿದ್ದಾರೆ. ಗಾಬರಿ ಬಿದ್ದ ಕಾಡಾನೆ ಪಟ್ಟಣದ ತುಂಬೆಲ್ಲಾ ಓಡಾಡಿದೆ. ನ್ಯಾಯಾಲಯ ಸಂಕೀರ್ಣ, ಎಪಿಎಂಸಿ ಆವರಣ, ಅರಣ್ಯ ಮಹಾವಿದ್ಯಾಲಯ ರಸ್ತೆಯಲ್ಲಿ ಓಡಾಡಿದೆ.

ಧುತ್ತನೆ ಎದುರಿಗೆ ಬಂದ ಆನೆಯನ್ನ ಕಂಡ ಜನರು ಹೆದರಿ ಕಾಲ್ಕಿತ್ತಿದ್ದಾರೆ. ಕೊನೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನ ಪಟ್ಟಣದಿಂದ ಹೊರಕ್ಕೆ ಕಳಿಸಿದ್ದಾರೆ. ಸಧ್ಯ ಕಿರಗೂರು ಗ್ರಾಮದತ್ತ ತೆರಳಿರೋ ಈ ಕಾಡಾನೆ ಸ್ಥಳೀಯ ದೇವರ ಕಾಡಿನಲ್ಲಿ ಆಶ್ರಯಪಡೆದಿದೆ. ಅಂದಾಜು 15 ವರ್ಷದ ಮರಿಯಾನೆ ಇದಾಗಿದ್ದು ಯಾರಿಗೂ ಅಪಾಯ ಮಾಡದೇ ಇರುವುದು ಸಮಧಾನಕರ ಸಂಗತಿ ಅಂತ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ