Bangalore Bandh; 6 ದಶಕಗಳಿಂದ ಚಳುವಳಿ ಮಾಡುತ್ತಿದ್ದೇನೆ, ಆದರೆ ಇವತ್ತಿನಷ್ಟು ಪೊಲೀಸರನ್ನು ಯಾವತ್ತೂ ನೋಡಿರಲಿಲ್ಲ: ವಾಟಾಳ್ ನಾಗರಾಜ್
Bangalore Bandh: ಸಿದ್ದರಾಮಯ್ಯ ಯಾರಪ್ಪನ ಮನೆ ನೀರು ಅಂತ ತಮಿಳುನಾಡುಗೆ ಹರಿಸಿದ್ದಾರೆ? ಇವತ್ತು ನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸುವ ಅಗತ್ಯವೇನಿತ್ತು? ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರೈತರು ರ‍್ಯಾಲಿ ನಡೆಸಲು ಅನುಮತಿ ನೀಡಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ ಅಂತ ನಾಗರಾಜ್, ಸಿದ್ದರಾಮಯ್ಯ ಸರ್ಕಾರವನ್ನು ಜರಿದರು.
ಬೆಂಗಳೂರು: ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು, ಕಾವೇರಿ ನದಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರು ಏನು ಕಳ್ಳರೇ, ದೇಶದ್ರೋಹಿಗಳೇ? ಪೊಲೀಸರು ಅವರನ್ನು ಯಾಕೆ ಬಂಧಿಸುತ್ತಿದ್ದಾರೆ, ರೈತರು ತಮ್ಮ ಹಕ್ಕನ್ನು ಕೇಳುವುದು ತಪ್ಪಾ? ಇವತ್ತು ಎಲ್ಲಿ ನೋಡಿದರೂ ಪೊಲೀಸರು, ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ನಾಗರಾಜ್, ಸಿದ್ದರಾಮಯ್ಯ ಯಾರಪ್ಪನ ಮನೆ ನೀರು ಅಂತ ತಮಿಳುನಾಡುಗೆ ಹರಿಸಿದ್ದಾರೆ? ತಾವು 60 ವರ್ಷಗಳಿಂದ ಚಳುವಳಿಗಳನ್ನು ಮಾಡಿಕೊಂಡು ಬಂದಿದ್ದು ಇದುವರೆಗೆ ಸುಮಾರು 15,000 ಗಳಷ್ಟು ಚಳುವಳಿಗಳನ್ನು ನಡೆಸಿರುವು ಇವತ್ತು ನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸುವ ಅಗತ್ಯವೇನಿತ್ತು? ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರೈತರು ರ‍್ಯಾಲಿ ನಡೆಸಲು ಅನುಮತಿ ನೀಡಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ ಅಂತ ನಾಗರಾಜ್, ಸಿದ್ದರಾಮಯ್ಯ ಸರ್ಕಾರವನ್ನು ಜರಿದರು. ದಾಗಿ ಹೇಳಿದ ಅವರು ಇದಕ್ಕಿಂತ ಮೊದಲು ಯಾವತ್ತೂ ಈ ಪಾಟಿ ಪೊಲೀಸರನ್ನು ನೋಡಿರಲಿಲ್ಲ ಅಂತ ಹೇಳಿದರು. ಇವತ್ತು ನಗರದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸುವ ಅಗತ್ಯವೇನಿತ್ತು? ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರೈತರು ರ‍್ಯಾಲಿ ನಡೆಸಲು ಅನುಮತಿ ನೀಡಿದ್ದರೆ ಆಕಾಶ ಕಳಚಿ ಬೀಳುತ್ತಿತ್ತೇ ಅಂತ ನಾಗರಾಜ್, ಸಿದ್ದರಾಮಯ್ಯ ಸರ್ಕಾರವನ್ನು ಜರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ