ಅಪ್ಪನಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ‘ಫೈರ್ ಫ್ಲೈ’ ಚಿತ್ರದ ನಿರ್ಮಾಪಕಿ ನಿವೇದಿತಾ ಶಿವರಾಜ್​ಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2025 | 8:19 PM

ನಿವೇದಿತಾ ಹೊಸಬರನ್ನು ಹಾಕಿಕೊಂಡು ‘ಫೈರ್ ಫ್ಲೈ’ ಚಿತ್ರವನ್ನು ನಿರ್ಮಿಸಿದ್ದು ಇದರಲ್ಲಿ ಮಾನವನ ಭಾವನೆಗಳನ್ನು ಬಹಳ ಅದ್ಭುತವಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳುತ್ತಾರೆ. ಸಿನಿಮಾ ಕುಟುಂಬವನ್ನು ಪ್ರತಿನಿಧಿಸುವುದರಿಂದ ಸಹಜವಾಗೇ ಒತ್ತಡವಿರುತ್ತದೆ ಆದರೆ ಅಪ್ಪನಿಂದ ತಾನು ಬಹಳಷ್ಟು ಕಲಿತಿರುವುದಾಗಿ ನಿವೇದಿತಾ ಹೇಳುತ್ತಾರೆ. ಶ್ರೀ ಮುತ್ತು ಸಿನಿ ಸರ್ವಿಸಸ್ ಸ್ಥಾಪಿಸಿ ಎರಡು ದಶಕಗಳ ಬಳಿಕ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರು, ಏಪ್ರಿಲ್ 7: ನಿವೇದಿತಾ ಶಿವರಾಜ್​​ಕುಮಾರ್ (Nivedita Shiva Rajkumar) ಅವರಿಗೆ ಸಿನಿಮಾ ರಕ್ತದಲ್ಲೇ ಇದೆ, ದೊಡ್ಮನೆ ಕುಟುಂಬದ ಕುಡಿ ಅಂದರೆ ಸುಮ್ನೇನಾ? ಶ್ರೀ ಮುತ್ತು ಸಿನಿ ಸರ್ವಿಸಸ್ ಸಂಸ್ಥೆಯಿಂದ ವೆಬ್ ಸಿರೀಸ್ ನಿರ್ಮಿಸುತ್ತಿದ್ದ ನಿವೇದಿತಾ ‘ಫೈರ್ ಫ್ಲೈ’ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್​ವುಡ್​​ಗೂ ಕಾಲಿಟ್ಟಿದ್ದಾರೆ. ಟಿವಿ9ನೊಂದಿಗೆ ನಡೆಸಿರುವ ಮುಕ್ತ ಮಾತುಕತೆಯಲ್ಲಿ ನಿವೇದಿತಾ ಒಬ್ಬ ನಿರ್ಮಾಪಕಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ಯುಎಸ್ ನಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ತಾಯ್ನಾಡಿಗೆ ಮರಳಿರುವ ಡಾ ಶಿವರಾಜ್ ಕುಮಾರ್ ಮಗಳ ಪಕ್ಕದಲ್ಲೇ ಕೂತು ಅವರು ಆತ್ಮವಿಶ್ವಾಸದಿಂದ ಆಡುವ ಮಾತುಗಳನ್ನು ಪ್ರೀತಿ ಮತ್ತು ಅಭಿಮಾನದಿಂದ ಕೇಳಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ:  ‘ಕ್ಷಮೆ ಅನ್ನೋದು ಸಣ್ಣ ಪದ’; ಗೀತಾಗೆ ಸಾರಿ ಕೇಳಿ ಕಣ್ಣೀರು ಹಾಕಿದ ಶಿವರಾಜ್​ಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.