ಎರಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯಿಂದ ಇಷ್ಟು ದೊಡ್ಡ ಸುಳ್ಳೇ? ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

|

Updated on: Nov 14, 2023 | 2:41 PM

ಸೋಫಾಗಳನ್ನು ಲೋಕೋಪಯೋಗಿ ಇಲಾಖೆ ಮುಖ್ಯಮಂತ್ರಿಯವರಿಗೆ ಗಿಫ್ಟಾಗಿ ನೀಡಿಲ್ಲ, ಎರಡು ಸೋಫಾಗಳನ್ನು ಇಲಾಖೆಯ ಬಂಗ್ಲೆಯಲ್ಲಿ ಇರಿಸಿದೆ ಎಂದು ಲಕ್ಷ್ಮಣ್ ಹೇಳಿದರು. ಒಂದರ ಬೆಲೆ ರೂ. 72,250 ಮತ್ತೊಂದರ ಬೆಲೆ ರೂ.1,27,850 ಆಗಿದೆ ಎಂದ ಅವರು ತಾನು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದಾಗ ಇಡೀ ಭಾರತದಲ್ಲೇ ಅತ್ಯಂತ ದುಬಾರಿ ಸೋಫಾದ ಬೆಲೆ ರೂ. 4 ನಾಲ್ಕು ಲಕ್ಷಗಳಷ್ಟಿದೆ ಎಂದು ಲಕ್ಷ್ಮಣ್ ಹೇಳಿದರು.

ಮೈಸೂರು: ಮಾಜಿ ಪ್ರಧಾನ ಮಂತ್ರಿಯ ಮಗ, ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಿರಾಧಾರ ಮತ್ತು ಹಸೀ ಸುಳ್ಳಿಗಳನ್ನು ಹೇಳತ್ತಿರುವುದು ಶೋಚನೀಯ ಸಂಗತಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (M Laxman) ಹೇಳಿದರು. ನಗರdಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲಕ್ಷ್ಮಣ, ಪ್ರಬಲ ಮಂತ್ರಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ರೂ. 1.90 ಕೋಟಿ ಬೆಲೆಯ ಸೋಫಾ ಸೆಟ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾರೆ ಅಂತ ಹೇಳಿದ್ದಾರೆ. ಸುಳ್ಳು ಹೇಳಲು ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ, ತಾನು ದಾಖಲೆಗಳನ್ನು ಪರಶೀಲಿಸಿದ್ದು, ಸೋಫಾಗಳನ್ನು ಲೋಕೋಪಯೋಗಿ ಇಲಾಖೆ ಮುಖ್ಯಮಂತ್ರಿಯವರಿಗೆ ಗಿಫ್ಟಾಗಿ ನೀಡಿಲ್ಲ, ಎರಡು ಸೋಫಾಗಳನ್ನು ಇಲಾಖೆಯ ಬಂಗ್ಲೆಯಲ್ಲಿ ಇರಿಸಿದೆ ಎಂದು ಲಕ್ಷ್ಮಣ್ ಹೇಳಿದರು. ಒಂದರ ಬೆಲೆ ರೂ. 72,250 ಮತ್ತೊಂದರ ಬೆಲೆ ರೂ.1,27,850 ಆಗಿದೆ ಎಂದ ಅವರು ತಾನು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದಾಗ ಇಡೀ ಭಾರತದಲ್ಲೇ ಅತ್ಯಂತ ದುಬಾರಿ ಸೋಫಾದ ಬೆಲೆ ರೂ. 4 ನಾಲ್ಕು ಲಕ್ಷಗಳಷ್ಟಿದೆ ಎಂದು ಲಕ್ಷ್ಮಣ್ ಹೇಳಿದರು.

ಸಿದ್ದರಾಮಯ್ಯನವರಿಗೆ ಸೋಫಾ ಉಡುಗೊರೆಯಾಗಿ ಸೋಫಾಗಳನ್ನು ಯಾರಾದರೂ ನೀಡಿರುವ ಬಗ್ಗೆ ಕುಮಾರಸ್ವಾಮಿಯವರಲ್ಲಿ ದಾಖಲೆಗಳಿದ್ದರೆ ನೀಡಲಿ ಎಂದ ಅವರು, ಕುಮಾರಸ್ವಾಮಿ ಹೇಳಿರುವ ಈ ಹಸೀ ಸುಳ್ಳಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವ ಗಂಭೀರ ಚಿಂತನೆ ಕೆಪಿಸಿಸಿ ನಡೆಸಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on