ಚೆನ್ನಮ್ಮನವರ 11ನೇ ದಿನದ ಕಾರ್ಯ: ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು

Edited By:

Updated on: Jul 30, 2026 | 12:36 PM

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ದಿವಂಗತ ಪತ್ನಿ ಚೆನ್ನಮ್ಮನವರ ಪುಣ್ಯ ಸ್ಮರಣೆಯ ಅಂಗವಾಗಿ ಮಾವಿನಕೆರೆ ಸಮಾಧಿ ಬಳಿ ಮೊದಲ ಪೂಜೆ ಸಲ್ಲಿಸಿದರು. ಹೂವಿನ ಹಾರ ಮತ್ತು ಮಲ್ಲಿಗೆ ಹೂಗಳನ್ನು ಅರ್ಪಿಸಿ ಪತ್ನಿಯ ನೆನಪಲ್ಲಿ ಭಾವುಕರಾಗಿ ಮೌನವಾಗಿ ಕುಳಿತರು. ಕುಟುಂಬ ಸದಸ್ಯರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಹಾಸನ, ಜುಲೈ 30: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ದಿವಂಗತ ಪತ್ನಿ ಚೆನ್ನಮ್ಮನವರ ಪುಣ್ಯ ಸ್ಮರಣೆ ಅಂಗವಾಗಿ ಮಾವಿನಕೆರೆ ಬಳಿಯ ಸಮಾಧಿ ಸ್ಥಳದಲ್ಲಿ ಮೊದಲ ಪೂಜೆ ಸಲ್ಲಿಸಿದರು. ಪತ್ನಿಯ ಸಮಾಧಿಗೆ ಹೂವಿನ ಹಾರ ಹಾಕಿ, ಮಲ್ಲಿಗೆ ಹೂಗಳನ್ನು ಅರ್ಪಿಸಿ ನಮಿಸಿದರು. ನಂತರ ಅಗಲಿದ ಪತ್ನಿ ಚೆನ್ನಮ್ಮನವರ ನೆನಪಿನಲ್ಲಿ ಸಮಾಧಿ ಬಳಿ ಮೌನವಾಗಿ ಕುಳಿತು ಭಾವುಕರಾದರು. ಚೆನ್ನಮ್ಮನವರ ಉತ್ತರಕ್ರಿಯೆ ಹಿನ್ನೆಲೆಯಲ್ಲಿ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಈ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಕುಟುಂಬಸ್ಥರು ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಯ ನಂತರ ಮಾವಿನಕೆರೆ ಚೆನ್ನಮ್ಮ ಸಮಾಧಿ ಬಳಿ ಉತ್ತರಕ್ರಿಯೆಗಳು ನೆರವೇರಿದವು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us