ರಮೇಶ್ ಜಾರಕಿಹೊಳಿ-ಶಿವಕುಮಾರ್ ಜಗಳ ಪ್ರಸ್ತಾಪಿಸಿದ ಕುಮಾರಸ್ವಾಮಿ ತಮ್ಮ ಹಿಟ್ ಅಂಡ್ ರನ್ ಸ್ವಭಾವ ಮತ್ತೊಮ್ಮೆ ಪ್ರದರ್ಶಿಸಿದರು!
ಶಿವಕುಮಾರ್ ಕನಕಪುರ ಸಂಗಮದಿಂದ ಅವರು ಮೇಕೆದಾಟು ಯೋಜನೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ ಎಂದು ಹೇಳಿದರು. ಶಿವಕುಮಾರ್ ಅವರನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಭಾಷೆಯ ಎಲ್ಲೆ ಮೀರುತ್ತಿದ್ದಾರೆ. ಏಕವಚನದಲ್ಲೇ ದಾಳಿ ನಡೆಸಿ ತಾನೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೋದನ್ನು ಮರೆಯುತ್ತಿದ್ದಾರೆ
ರಾಮನಗರ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ (DK Shivakumar) ವಾಗ್ದಾಳಿಯನ್ನು ಹೆಚ್ಚಿಸುವ ಜೊತೆಗೆ ತೀವ್ರತೆಯನ್ನೂ ಹೆಚ್ಚಿಸಿದ್ದಾರೆ. ನಿನ್ನೆ ಜಿಲ್ಲೆಯ ಬಿಡದಿಯಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ಮಾತಾಡಿದ ಕುಮಾರಸ್ವಾಮಿ, ರಮೇಶ್ ಜಾರಕಹೊಳಿ (Ramesh Jarkiholi) ಮತ್ತು ಶಿವಕುಮಾರ ನಡುವಿನ ವೈಷಮ್ಯವನ್ನು ಪ್ರಸ್ತಾಪಿಸಿದರು. ಜಾರಕಿಹೊಳಿ ಜೊತೆ ಜಗಳ ಇರೋದು ತನಗಲ್ಲ; ಶಿವಕುಮಾರ್ ಗೆ ಅವರು ಎಂದು ಹೇಳಿದಾಗ ಕಾರ್ಯಕರ್ತರಲ್ಲಿ ಒಬ್ಬರು, ಪಿಎಲ್ ಡಿ ಬ್ಯಾಂಕ್ ವಿಷಯಕ್ಕೆ ಸಂಬಂಧಿಸಿದಂತೆ ಅನ್ನುತ್ತಾರೆ. ಕೂಡಲೇ ಕುಮಾರಾಸ್ವಾಮಿ, ಜಗಳ ಇರೋದು ಆ ವಿಷಯಕ್ಕಲ್ಲ ಬೇರೆ ಕಾರಣಕ್ಕೆ, ಅದೊಂದು ದೊಡ್ಡ ಕತೆ ಇಲ್ಲಿ ಆ ಚರ್ಚೆ ಬೇಡ ಎಂದು ಹೇಳುತ್ತಾರೆ. ಇಲ್ಲೂ ಕುಮಾರಸ್ವಾಮಿ ತಮ್ಮ ಹಿಟ್ ಅಂಡ್ ರನ್ ಸ್ವಭಾವವನ್ನು ಪ್ರದರ್ಶಿಸುತ್ತಾರೆ. ಶಿವಕುಮಾರ್ ವಿರುದ್ಧ ಟೀಕೆ ಮುಂದುವರಿಸುವ ಅವರು ಕನಕಪುರ ಸಂಗಮದಿಂದ ಅವರು ಮೇಕೆದಾಟು ಯೋಜನೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ ಎಂದು ಹೇಳಿದರು. ಶಿವಕುಮಾರ್ ಅವರನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಭಾಷೆಯ ಎಲ್ಲೆ ಮೀರುತ್ತಿದ್ದಾರೆ. ಏಕವಚನದಲ್ಲೇ ದಾಳಿ ನಡೆಸಿ ತಾನೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೋದನ್ನು ಮರೆಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ