ಹೆಚ್ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ ಎಂದ ಹೆಚ್ ವಿಶ್ವನಾಥ್
ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು ಹೆಚ್ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ ಎಂದು ಕಟಕಿಯಾಡಿದರು.
ಹೆಚ್ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ ಎಂದ ಹೆಚ್ ವಿಶ್ವನಾಥ್: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Adagur H. Vishwanath) ಪೆನ್ ಡ್ರೈವ್ (Pen Drive) ಆರೋಪದ ಬಗ್ಗೆ ಮೈಸೂರಿನಲ್ಲಿ (Mysore) ಹೆಚ್ಡಿಕೆ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಒಬ್ಬ ಹಿರಿಯ ನಾಯಕ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಮಾಜಿ ಪ್ರಧಾನಿಗಳ ಮಗ. ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದ್ದರೆ ತೋರಿಸಲಿ. ಇದು ಒಂಥರಾ ಬ್ಲ್ಯಾಕ್ ಮೇಲಿಂಗ್. ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಇದೊಂದು ಮಿಮಿಕ್ರಿ ತರಾ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಎಚ್ ವಿಶ್ವನಾಥ್ (Adagur H. Vishwanath) ವಾಗ್ದಾಳಿ ನಡೆಸಿದರು. ಈ ವೇಳೆ ಮುಂದುವರಿದು ಮಾತನಾಡಿದ ಹೆಚ್.ವಿಶ್ವನಾಥ್ ಅವರು ಹೆಚ್ ಡಿ ಕುಮಾರಸ್ವಾಮಿಯೇ ಬಿಜೆಪಿ ವಿಪಕ್ಷ ನಾಯಕ (Leader of Opposition) ಎಂದು ಕಟಕಿಯಾಡಿದರು.
Published on: Jul 08, 2023 05:07 PM
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
