ಮಕ್ಕಳ ಭವಿಷ್ಯಕ್ಕಾಗಿ ನನ್ನ ಜಮೀನಲ್ಲಿ ಕಲ್ಲು ಒಡೆದಿದ್ದೇನೆ ಬಂಡೆ ಸೀಳಿದ್ದೇನೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 16, 2024 | 11:43 AM

ಅವರು ಹೇಳಿದ್ದನ್ನೆಲ್ಲ ಸಮುದಾಯಕ್ಕೋಸ್ಕರ ಸಹಿಸಿಕೊಂಡೆ, ಆದರೆ ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತದೆ, ತಮ್ಮ ರಾಜಕೀಯ ಗುರಿಸಾಧನೆಗಾಗಿ ಅವರು ಸಮುದಾಯದಿಂದ ದೂರವಾಗುತ್ತಿದ್ದಾರೆ, ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತನ್ನ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿರುವ ವೈಯಕ್ತಿಕ ಟೀಕೆಗಳು (personal comments) ಮಾಡುತ್ತಿದ್ದಾರೆ, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಹೇಳಿದ್ದನ್ನೆಲ್ಲ ಸಮುದಾಯಕ್ಕೋಸ್ಕರ ಸಹಿಸಿಕೊಂಡೆ, ಆದರೆ ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತದೆ, ತಮ್ಮ ರಾಜಕೀಯ ಗುರಿಸಾಧನೆಗಾಗಿ ಅವರು ಸಮುದಾಯದಿಂದ ದೂರವಾಗುತ್ತಿದ್ದಾರೆ, ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಶಿವಕುಮಾರ್ ಹೇಳಿದರು. ಬಂಡೆ ಒಡೆದೆ, ಕಲ್ಲು ಸೀಳಿದೆ ಅಂತ ಕುಮಾರಸ್ವಾಮಿ ಹೇಳ್ತಾರಲ್ಲ? ಹೌದು, ನನ್ನ ಜಮೀನಲ್ಲಿ ಬಂಡೆ ಸೀಳಿದ್ದೇನೆ, ಕಲ್ಲು ಒಡೆದಿದ್ದೇನೆ, ನನ್ನ ಮಕ್ಕಳ ಭವಿಷ್ಯಕ್ಕಾಗಿ ಅದೆಲ್ಲವನ್ನು ಮಾಡಿದ್ದೇನೆ ಎಂದು ಹೇಳಿದ ಶಿವಕುಮಾರ್, ಯಾವುದೇ ಮಹಿಳೆಯ ಆಸ್ತಿಯನ್ನು ತಾನು ಕಬಳಿಸಿಲ್ಲ ಎಂದರು. ಅಪಾರ್ಟ್ ಮೆಂಟ್ ನವರನ್ನು ಹೆದರಿಸಿದ್ದು ಸುಳ್ಳೆಂದ ಶಿವಕುಮಾರ್, ನೀರಿನ ಅಗಾಧ ಕೊರತೆಯ ನಡುವೆಯೂ ಜನರಿಗೆ ಸಪರ್ಮಕವಾಗಿ ನೀರು ಒದಗಿಸುತ್ತಿರುವುದು ಸಹಿಸಲಾಗದೆ ಜನರ ಗಮನ ಡೀವಯೇಟ್ ಮಾಡಲು ಸುಳ್ಳು ಅರೋಪ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.