AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್

ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 15, 2024 | 1:20 PM

Share

ಈಗ ಅದೇ ಸವಾಲನ್ನು ನವೀಕರಿಸುತ್ತೇನೆ. ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮಾಧ್ಯಮದವರು ಆಯೋಜಿಸಿದರೂ ಓಕೆ, ತಾನು ಅದಕ್ಕೆ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗುವುದು ಸಾಧ್ಯವೇ ಇಲ್ಲ, ಚರ್ಚೆ ನಡೆದರೆ ಅವರೆಂಥ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಬೆಳಗಾವಿ: ಎರಡು ಪಕ್ಷಗಳ ರಾಜ್ಯಾಧ್ಯಕ್ಷರ ನಡುವೆ ತೀವ್ರ ಸ್ವರೂಪ ಮಾತಿನ ಕಾಳಗ ಶುರುವಾಗಿದೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿ ಶಿವಕುಮಾರ್ ಅವರನ್ನು ಮಿಸ್ಟರ್ ಶಿವಕುಮಾರ್ ಅನ್ನುತ್ತಾ ತೆಗಳಿದರೆ, ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಡಿಕೆ ಶಿವಕುಮಾರ್ (DK Shivakumar) ಮಿಸ್ಟರ್ ಕುಮಾರಸ್ವಾಮಿ ಅನ್ನುತ್ತಾ ಜರಿಯುತ್ತಾರೆ. ರಾಜ್ಯದ ಮಹಿಳೆಯರೆಲ್ಲ ತಿರುಗಿ ಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾದಂತಿದೆ (enlightenment), ಅದರೆ ಅವರು ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸುವುದು ಬೇಡ, ಹಿಂದೆ ಹೇಳಿದಂತೆಯೇ ಈಗಲೂ ಎನ್ ಡಿಎ ಪಾರ್ಟ್ನರ್ ಗೆ ಸವಾಲು ಹಾಕುತ್ತೇನೆ, ತಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ, ಇದಕ್ಕೂ ಮೊದಲು ಅಸೆಂಬ್ಲಿಯಲ್ಲಿ ಚರ್ಚಿಸುವ ಅಂತ ಹೇಳಿದ್ದೆ, ಆದರೆ ಅವರು ಬರಲಿಲ್ಲ, ಈಗ ಅದೇ ಸವಾಲನ್ನು ನವೀಕರಿಸುತ್ತೇನೆ. ವಿಧಾನಸಭೆಯಲ್ಲೇ ಚರ್ಚೆ ನಡೆದರೆ ಉತ್ತಮ, ಅಥವಾ ಮಾಧ್ಯಮದವರು ಆಯೋಜಿಸಿದರೂ ಓಕೆ, ತಾನು ಅದಕ್ಕೆ ಸಿದ್ಧ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಸಂಸತ್ತಿಗೆ ಹೋಗುವುದು ಸಾಧ್ಯವೇ ಇಲ್ಲ, ಚರ್ಚೆ ನಡೆದರೆ ಅವರೆಂಥ ಸುಳ್ಳುಗಾರ ಮತ್ತು ಮೋಸಗಾರ ಅನ್ನೋದನ್ನು ಬಯಲು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸ ನನ್ನ ಧರ್ಮಪತ್ನಿ ಮಾಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More