Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸ ನನ್ನ ಧರ್ಮಪತ್ನಿ ಮಾಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸ ನನ್ನ ಧರ್ಮಪತ್ನಿ ಮಾಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 15, 2024 | 12:41 PM

ತನ್ನದು ಕಾಂಗ್ರೆಸ್ ಸಂಸ್ಕೃತಿ ಅಲ್ಲ ಎಂದ ಕುಮಾರಸ್ವಾಮಿ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ವಿರುದ್ಧಾಹರಿಹಾಯ್ದರು. ಎಲ್ಲೋ ಕುಳಿತು ತನ್ನ ಬಗ್ಗೆ ಕಾಮೆಂಟ್ ಮಾಡುವ ಸುರ್ಜೆವಾಲಾಗೆ ತಾನು ಹಿಂದೆ ಚಿತ್ರನಟಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ವಿರುದ್ಧ ಮಾಡಿದ್ದ ಅವಹೇಳನಕಾರಿ ಕಾಮೆಂಟ್ ಮರೆತುಹೋಗಿದೆಯೇ? ಎಂದು ಪ್ರಶ್ನಿಸಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ತಾನು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ, ಅದರೆ ಕಾಂಗ್ರೆಸ್ ನಾಯಕರು (Congress leaders) ನಾನು ಬಳಸಿದ ಪದಗಳನ್ನು ತಿರುಚಿ ಅಪಪ್ರಚಾರ ನಡೆಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ಗೋ ಬ್ಯಾಕ್ ಪ್ರತಿಭಟನೆಗಳನ್ನು ಮಾಡಿಸುತ್ತಿದ್ದಾರೆ ಎಂದರು. ತಮ್ಮಿಂದ ಹಿಂದೆ ಆಗಿರಬಹುದಾದ ತಪ್ಪಗಳನ್ನು ವಿಧಾನಸಭಾ ಅಧಿವೇಶನಲ್ಲೇ (Assembly session) ಅಂಗೀಕರಿಸಿದ್ದು ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸವನ್ನು ತಮ್ಮ ಧರ್ಮಪತ್ನಿ ಮಾಡಿದ್ದಾರೆಂದು ಹೇಳಿದರು. ತನ್ನದು ಕಾಂಗ್ರೆಸ್ ಸಂಸ್ಕೃತಿ ಅಲ್ಲ ಎಂದ ಕುಮಾರಸ್ವಾಮಿ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ವಿರುದ್ಧಾಹರಿಹಾಯ್ದರು. ಎಲ್ಲೋ ಕುಳಿತು ತನ್ನ ಬಗ್ಗೆ ಕಾಮೆಂಟ್ ಮಾಡುವ ಸುರ್ಜೆವಾಲಾಗೆ ತಾನು ಹಿಂದೆ ಚಿತ್ರನಟಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ವಿರುದ್ಧ ಮಾಡಿದ್ದ ಅವಹೇಳನಕಾರಿ ಕಾಮೆಂಟ್ ಮರೆತುಹೋಗಿದೆಯೇ? ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ