ನಾಮಪತ್ರ ಸಲ್ಲಿಸುವ ಮೊದಲು ಮಗ ಮೃಣಾಲ್​ನಿಂದ ವಿವಿಧ ಮಠಾಧೀಶರ ಪಾದಪೂಜೆ ಮಾಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ನಾಮಪತ್ರ ಸಲ್ಲಿಸುವ ಮೊದಲು ಮಗ ಮೃಣಾಲ್​ನಿಂದ ವಿವಿಧ ಮಠಾಧೀಶರ ಪಾದಪೂಜೆ ಮಾಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 15, 2024 | 12:06 PM

ಮೃಣಾಲ್ ಮತ್ತು ಕುಟುಂಬದ ಇತರ ಸದಸ್ಯರು ಮಠಾಧೀಶರ ಪಾದಪೂಜೆ ಮಾಡಿದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಫಲಪುಷ್ಪಗಳನ್ನು ನೀಡಿ ಸತ್ಕರಿಸಿದರು. ಕ್ಷೇತ್ರದಲ್ಲಿ ಮೃಣಾಲ್ ಎದುರಾಳಿ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಆಗಿದ್ದಾರೆ.

ಬೆಳಗಾವಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬೆಳಗಾವಿ ಲೋಕಸಭಾ ಕ್ಷೇತ್ರದಿಂದ (Belagavi LS seat) ಸ್ಪರ್ಧಿಸಿರುವ ತಮ್ಮ ಮಗ ಮೃಣಾಲ್ (Mrinal Hebbalkar) ಗೆಲುವಿಗೆ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಗರಲಿರುಳು ಕ್ಷೇತ್ರದಲ್ಲಿ ಸುತ್ತಾಡಿ ಜನರ ಮತಯಾಚಿಸುತ್ತಿರುವ ಕೆಲಸ ಒಂದಡೆಯಾದರೆ, ಮನಮಾಠ್ಯಗಳಿಗೆ ತೆರಳಿ ಮಠಾಧೀಶ್ವರ ಸಹಕಾರ ಕೋರುತ್ತಿದ್ದಾರೆ. ಇಂದು ಮೃಣಾಲ್ ನಾಮಪತ್ರ ಸಲ್ಲಿಸುವ ಮೊದಲು ಲಕ್ಷ್ಮಿ, ವಿವಿಧ ಮಠಾಧೀಶರನ್ನು ತಮ್ಮ ಮನೆಗೆ ಆಹ್ವಾನಿಸಿ ಮಗನಿಂದ ಅವರ ಪಾದಪೂಜೆ ಮಾಡಿಸಿ ಅಶೀರ್ವಾದ ಪಡೆಸಿಕೊಂಡರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ, ಬೇರೆ ಬೇರೆ ಮಠಗಳ ಸುಮಾರು 25 ಸ್ವಾಮೀಜಿಗಳನ್ನು ಸಚಿವೆಯ ಮನೆಯಲ್ಲಿ ನೋಡಬಹುದು. ಮೃಣಾಲ್ ಮತ್ತು ಕುಟುಂಬದ ಇತರ ಸದಸ್ಯರು ಮಠಾಧೀಶರ ಪಾದಪೂಜೆ ಮಾಡಿದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ, ಫಲಪುಷ್ಪಗಳನ್ನು ನೀಡಿ ಸತ್ಕರಿಸಿದರು. ಕ್ಷೇತ್ರದಲ್ಲಿ ಮೃಣಾಲ್ ಎದುರಾಳಿ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಆಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಳಗಾವಿ ತನ್ನ ಕರ್ಮಭೂಮಿ ಎನ್ನುವ ಶೆಟ್ಟರ್ ಜಿಲ್ಲೆಗೆ ನೀಡಿರುವ ಕೊಡುಗೆಯಾದರೂ ಏನು? ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

Published on: Apr 15, 2024 12:05 PM