ಸಕ್ಕರೆ ನಾಡಲ್ಲಿ ಪ್ರತಿಮೆ ಪಾಲಿಟಿಕ್ಸ್; ಶಿವಕುಮಾರ ಸ್ವಾಮೀಜಿ ಪುತ್ಥಳಿ ಬೆನ್ನಲ್ಲೇ ಹೆಚ್​ಡಿಕೆಯಿಂದ ಬಸವಣ್ಣನ ಪುತ್ಥಳಿ ಅನಾವರಣ

Ayesha Banu

|

Updated on:Mar 19, 2023 | 10:23 AM

ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಚಳ್ಳಿ ಗ್ರಾಮದಲ್ಲಿಂದು ಜೆಡಿಎಸ್​ನಿಂದ ಬಸವಣ್ಣನ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ.

ಮಂಡ್ಯ: ಜಿಲ್ಲೆಯಲ್ಲಿ ಲಿಂಗಾಯತರ ಮತ ಸೆಳೆಯಲು ಪ್ರತಿಮೆ ಪಾಲಿಟಿಕ್ಸ್ ಜೋರಾಗಿದೆ. ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಚಳ್ಳಿ ಗ್ರಾಮದಲ್ಲಿಂದು ಜೆಡಿಎಸ್​ನಿಂದ ಬಸವಣ್ಣನ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. 20 ದಿನದ ಹಿಂದೆ ಶಿವಕುಮಾರ ಸ್ವಾಮೀಜಿ ಪುತ್ಥಳಿ ಅನಾವರಣ ಆಗಿತ್ತು. ಇದರ ಬೆನ್ನಲ್ಲೇ ಬಸವಣ್ಣನ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿ ಡಾ.ಇಂದ್ರೇಶ್​ ನಿರ್ಮಾಣ ಮಾಡಿಸಿದ್ದ ಪುತ್ಥಳಿ ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ವಿಜಯೇಂದ್ರ ಉದ್ಘಾಟಿಸಿದ್ದರು. ಇಂದು ಹೆಚ್​ಡಿ ಕುಮಾರಸ್ವಾಮಿ ಬಸವಣ್ಣನ ಪುತ್ಥಳಿ ಅನಾವರಣ ಮಾಡಲಿದ್ದಾರೆ.

Follow us on

Click on your DTH Provider to Add TV9 Kannada