ಅರಕಲಗೂಡು ಹಾಗೂ ಅರಸೀಕೆರೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುನಿಸು ಶಮನಗೊಳಿಸಲು ರೇವಣ್ಣ ಪ್ರಯತ್ನ

ಅರಕಲಗೂಡು ಹಾಗೂ ಅರಸೀಕೆರೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುನಿಸು ಶಮನಗೊಳಿಸಲು ರೇವಣ್ಣ ಪ್ರಯತ್ನ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 07, 2023 | 1:36 PM

ಶಿವಲಿಂಗೇಗೌಡರ ಮನವೊಲಿಸಲು ಮತ್ತು ಕಾರ್ಯಕರ್ತರ ನಡುವಿನ ಮುನಿಸನ್ನು ದೂರಮಾಡಲು ಸಭೆಗಳನ್ನು ನಡೆಸುತ್ತಿರುವುದಾಗಿ ರೇವಣ್ಣ ಹೇಳಿದರು.

ಹಾಸನದಲ್ಲಿ ಚುನಾವಣಾ ರಾಜಕೀಯ ಕಾವೇರುತ್ತಿದ್ದಂತೆಯೇ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ (HD Revanna) ಅವರು ಅರಕಲಗೂಡು (Arakalgud) ಮತ್ತು ಅರಸೀಕೆರೆ ಮತಕ್ಷೇತ್ರಗಳಲ್ಲಿನ ಪಕ್ಷದ ಕಾರ್ಯಕರ್ತರ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಪಕ್ಷದ ಅರಸೀಕೆರೆ ಶಾಸಕ ಕೆ ಎಮ್ ಶಿವಲಿಂಗೇಗೌಡರು (KM Shivalinge Gowda) ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಪ್ರಕಟಿಸಿರುವುದರಿಂದ ಈ ಭಾಗದ ಜೆಡಿಎಸ್ ಪಾಳೆಯದಲ್ಲಿ ಗೊಂದಲವೇರ್ಪಟ್ಟಿದೆ. ಅವರ ಮನವೊಲಿಸಲು ಮತ್ತು ಕಾರ್ಯಕರ್ತರ ನಡುವಿನ ಮುನಿಸನ್ನು ದೂರಮಾಡಲು ಸಭೆಗಳನ್ನು ನಡೆಸುತ್ತಿರುವುದಾಗಿ ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 07, 2023 12:55 PM