Kalaburagi: ತಲೆ ಮೇಲೆ ಕೊಡಹೊತ್ತು ಲಂಬಾಣಿ ಡಾನ್ಸ್ ಮಾಡಿದ ಸಿದ್ದರಾಮಯ್ಯ

Kalaburagi: ತಲೆ ಮೇಲೆ ಕೊಡಹೊತ್ತು ಲಂಬಾಣಿ ಡಾನ್ಸ್ ಮಾಡಿದ ಸಿದ್ದರಾಮಯ್ಯ

TV9 Web
| Updated By: Rakesh Nayak Manchi

Updated on: Feb 07, 2023 | 2:43 PM

ಕಲಬುರಗಿ ಆಳಂದ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಲಂಬಾಣಿ ಮಹಿಳೆಯರ ಜೊತೆ ನೃತ್ಯ ಮಾಡಿದರು.

ಕಲಬುರಗಿ: ಆಳಂದ ಪಟ್ಟಣದಲ್ಲಿ ಕಾಂಗ್ರೆಸ್​​ ಪ್ರಜಾಧ್ವನಿ ಯಾತ್ರೆ (Prajadhwani Yatra) ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಲಂಬಾಣಿ ಮಹಿಳೆಯರ ಜೊತೆ ಸಿದ್ದರಾಮಯ್ಯ (Siddaramaiah) ಅವರು ನಿಂತಲ್ಲೇ ಕೈಯಾಡಿಸಿ ಡಾನ್ಸ್ ಮಾಡಿ ಗಮನಸೆಳೆದರು. ನಂತರ ಕೊಡವನ್ನು ತಲೆ ಮೇಲೆ ಹೊತ್ತು ಡಾನ್ಸ್ (Siddaramaiah Dance) ಮಾಡಿದರು. ಸಮಾವೇಶಕ್ಕೆ ಆಗಮಿಸಿದ ಸಿದ್ದರಾಮಯ್ಯರಿಗೆ ಜೋಳದ ದಂಟಿನ ಬೃಹತ್ ಹಾರ ಹಾಕಲಾಯಿತು. ಕಲಬುರಗಿ ತಾಲೂಕಿನ ಪಟ್ಟಣ ಕ್ರಾಸ್​ನಲ್ಲಿ ಕ್ರೇನ್ ಮೂಲಕ ಮಾಜಿ ಮೇಯರ್ ಶರಣು ಮೋದಿ ಮತ್ತು ಅವರ ಬೆಂಬಲಿಗರರು ಜೋಳದ ದಂಟಿನ ಹಾರ ಹಾಕಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ