Hubballi: ಏಕಾಏಕಿ ಮನೆಗಳಿಗೆ ಬೀಗ ಹಾಕಿ ಊರು ತೊರೆದ ಕಲಘಟಗಿ ಜನ; ಕಾರಣ ಇಲ್ಲಿದೆ
ಕಲಘಟಗಿ ಪಟ್ಟಣದಲ್ಲಿ ಏಕಾಏಕಿಯಾಗಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಹೋಗಿದ್ದಾರೆ. ಇದಕ್ಕೆ ಕಾರಣವೇನೆಂದರೆ ಗ್ರಾಮ ದೇವಿ ಜಾತ್ರೆ. ಜಾತ್ರೆ ಹಿನ್ನೆಲೆ 3ಮಂಗಳವಾರ, 2 ಶುಕ್ರವಾರ ಮನೆಗೆ ಬೀಗ ಹಾಕಲಾಗುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಮನೆಗಳಿಗೆ ಬೀಗ ಹಾಕಲಾಗುತ್ತದೆ.
ಹುಬ್ಬಳ್ಳಿ: ಗ್ರಾಮ ದೇವಿ ಜಾತ್ರೆ ಹಿನ್ನಲೆ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ (Kalaghatgi Town) ಜನರು ಮನೆ ಖಾಲಿ ಮಾಡುವ ವಿಶಿಷ್ಟ ಆಚರಣೆಯೊಂದಿದೆ. ಜಾತ್ರೆ (Fair) ಹಿನ್ನಲೆ ಪಟ್ಟಣದ ಬಹುತೇಕ ಮನೆಗಳು ಖಾಲಿ ಖಾಲಿಯಾಗಿದೆ. ಜಾತಿ-ಬೇಧ ಇಲ್ಲದೆ ಮನೆ ತೊರೆದು ಜನರು ಹೋಗುತ್ತಾರೆ. ಮೂರು ಮಂಗಳವಾರ ಮತ್ತು ಎರಡು ಶುಕ್ರವಾರ ಮನೆಗಳಿಗೆ ಬೀಗ ಹಾಕಿ ಹೋಗುವ ಜನರು ಸಂಜೆಯಾಗುತ್ತಲೇ ವಾಪಸ್ ಆಗುತ್ತಾರೆ. ಇದು ಇಲ್ಲಿನ ಆಚರಣೆಯಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos