Special Wedding: ಮದುವೆ ಮಂಟಪಕ್ಕೆ ಉಡುಪಿಯ ವಧು-ವರ ಬಂದಿದ್ದು ಜೆಸಿಬಿಯಲ್ಲಿ!
ಈ ಮದುವೆಯ ಉಲ್ಲೇಖ ಯಾಕೆ ವಿಶಿಷ್ಟ ಅಂದರೆ ಆಡಿಟೋರಿಯಂಗೆ ವರ ಮತ್ತು ವಧು ಬಂದಿದ್ದು ಕಾರು, ಜೀಪ್ ಬಸ್ ಆಥವಾ ಬೈಕ್ ನಲ್ಲಲ್ಲ, ಜೆಸಿಬಿಯೊಂದರಲ್ಲಿ!
ಉಡುಪಿ: ಜೀವನದಲ್ಲಿ ಮದುವೆ ಅಂತ ಆಗೋದು ಒಂದೇ ಸಲ, ಹೌದು ತಾನೇ? ಇಲ್ಲ ಮಾರಾಯ್ರೇ ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಡಿವೋರ್ಸ್ ಪ್ರಕರಣಗಳನ್ನು ಪಕ್ಕಕ್ಕಿಟ್ಟು ಮಾತಾಡುತ್ತಿದ್ದೇವೆ. ಎಲ್ಲ ಧರ್ಮಗಳು (religions) ಹೇಳೋದು ಒಂದೇ-ಜೋಡಿಗಳನ್ನು ಭಗವಂತ ನಮಗಿಂತ ಮೊದಲೇ ನಿರ್ಧರಿಸುತ್ತಾನೆ. ಓಕೆ ವಿಷಯಕ್ಕೆ ಬರೋಣ. ಮಂಗಳವಾರ ಉಡುಪಿ (Udupi) ನಗರದಲ್ಲ್ಲಿರುವ ನಾರಾಯಣ ಸಭಾಭವನದಲ್ಲಿ (Narayana Auditorium) ಒಂದು ಮದುವೆ ನಡೆಯಿತು. ಈ ಮದುವೆಯ ಉಲ್ಲೇಖ ಯಾಕೆ ವಿಶಿಷ್ಟ ಅಂದರೆ ಆಡಿಟೋರಿಯಂಗೆ ವರ ಮತ್ತು ವಧು ಬಂದಿದ್ದು ಕಾರು, ಜೀಪ್ ಬಸ್ ಆಥವಾ ಬೈಕ್ ನಲ್ಲಲ್ಲ, ಜೆಸಿಬಿಯೊಂದರಲ್ಲಿ! ಮೊದಲು ವರ ಒಬ್ಬರೇ ಕಾಣುತ್ತಾರೆ ಆಮೇಲೆ ವಧು ಸಹ ಅವರ ಜೊತೆಗೂಡುತ್ತಾರೆ. ಅವರ ಜೊತೆ ಸ್ನೇಹಿತರು ಮತ್ತು ನೆಂಟರಿಷ್ಟರು ಸಹ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

