ನಿಟ್ಟೂರು ಹೆಚ್ ಎ ಎಲ್ ಘಟಕದಲ್ಲಿ 2018ರಲ್ಲೇ ಹೆಲಿಕಾಪ್ಟರ್ ತಯಾರಾಗಲಿದೆ ಅಂತ ಪ್ರಧಾನಿ ಮೋದಿ ಹೇಳಿದ್ದರು: ಜಿ ಪರಮೇಶ್ವರ್
ಅವತ್ತಿನ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, 2018 ರಲ್ಲೇ ಈ ಕಾರ್ಖಾನೆಯಲ್ಲಿ ತಯಾರಾಗುವ ಮೊದಲ ಹೆಲಿಕಾಪ್ಟರ್ ಹಾರಿಸುತ್ತೇವೆ ಅಂತ ಅವರು ಹೇಳಿದ್ದರು. ಆದರೆ 2023ರಲ್ಲಿ ಅದು ಸಾಧ್ಯವಾಗಿದೆ ಎಂದು ಪರಮೇಶ್ವರ್ ಹೇಳಿದರು.
ತುಮಕೂರು: ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಿ ಪರಮೇಶ್ವರ್ (D Parameshwar) ಅವರು ಸೋಮವಾರದಂದು ನಿಟ್ಟೂರಲ್ಲಿ ಹೆಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಲೋಕಾರ್ಪಣೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಅಭಿನಂದಿಸಿ ಧನ್ಯವಾದಗಳನ್ನು ಹೇಳಿದರು. ಆದರೆ ಕಾರ್ಖಾನೆ ನಿರ್ಮಾಣ ಕಾರ್ಯ ಬಹಳ ತ್ವರಿತ ಗತಿಯಲ್ಲಿ ಪೂರ್ಣಗೊಂಡು ಹೆಲಿಕಾಪ್ಟರ್ (helicopter) ತಯಾರಿಕೆ ಕೆಲಸ ಶುರುವಾಗಿದೆ ಎಂದು ಬಿಜೆಪಿಯವರು ಹೇಳುತ್ತಿರುವುದಕ್ಕೆ ಪರಮೇಶ್ವರ್ ಕಾಲೆಳೆದರು. 2016ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು ಮತ್ತು ಅವತ್ತಿನ ಭಾಷಣದಲ್ಲಿ ಅವರು, 2018 ರಲ್ಲೇ ಈ ಕಾರ್ಖಾನೆಯಲ್ಲಿ ತಯಾರಾಗುವ ಮೊದಲ ಹೆಲಿಕಾಪ್ಟರ್ ಹಾರಿಸುತ್ತೇವೆ ಅಂತ ಅವರು ಹೇಳಿದ್ದರು. ಆದರೆ 2023ರಲ್ಲಿ ಅದು ಸಾಧ್ಯವಾಗಿದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 07, 2023 06:14 PM
Latest Videos