Prajadhavni Yatre: ಕಲಬುರಗಿಯ ಪಟ್ಟಣ ಕ್ರಾಸ್ ಬಳಿ ಜೋಳದ ದಂಟಿನಿಂದ ಮಾಡಿದ ಹಾರದಿಂದ ಸಿದ್ದರಾಮಮ್ಯಗೆ ಸ್ವಾಗತ

Prajadhavni Yatre: ಕಲಬುರಗಿಯ ಪಟ್ಟಣ ಕ್ರಾಸ್ ಬಳಿ ಜೋಳದ ದಂಟಿನಿಂದ ಮಾಡಿದ ಹಾರದಿಂದ ಸಿದ್ದರಾಮಮ್ಯಗೆ ಸ್ವಾಗತ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 07, 2023 | 3:08 PM

ಆ ಭಾಗದ ಪ್ರಮುಖ ಬೆಳೆಯಾಗಿರುವ ಜೋಳದ ಪೈರಿನ ದಂಟುಗಳಿಂದ ತಯಾರಿಸಿದ ಹಾರದಿಂದ ಸಿದ್ದರಾಮಯ್ಯನವರನ್ನು ಸ್ವಾಗತಿಸಲಾಯಿತು.

ಕಲಬುರಗಿ: ಸಿದ್ದರಾಮಯ್ಯನವರ (Siddaramaiah) ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ (Prajadhavni Yatre) ಕಲಬುರಗಿ ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನೆವರಿ ತಿಂಗಳು ಉತ್ತರಾರ್ಧದಿಂದಲೇ ಬಿಸಿಲು ಬಲಿಯಲಾರಂಭಿಸುತ್ತದೆ. ಆದರೆ, ಜನ ಸಿದ್ದರಾಮಯ್ಯನವರನ್ನು ನೋಡಲು ಗುಂಪುಗುಂಪಾಗಿ ಬರುತ್ತಿದ್ದಾರೆ. ಮಂಗಳವಾರ ಕಲಬುರಗಿ (Kalaburagi) ತಾಲ್ಲೂಕಿನ ಪಟ್ಣಣ ಕ್ರಾಸ್ (Pattan Cross) ಬಳಿ ಸಿದ್ದರಾಮಯ್ಯ ಮತ್ತು ಇತರ ಕೆಲ ಕಾಂಗ್ರೆಸ್ ನಾಯಕರನ್ನು ಹೊತ್ತ ಪ್ರಜಾಧ್ವನಿ ಬಸ್ ಬಂದಾಗ ಜನ ವಿನೂತನ ಶೈಲಿಯಲ್ಲಿ ಅವರನ್ನು ಸ್ವಾಗತಿಸಿದರು. ಆ ಭಾಗದ ಪ್ರಮುಖ ಬೆಳೆಯಾಗಿರುವ ಜೋಳದ ಪೈರಿನ ದಂಟುಗಳಿಂದ ತಯಾರಿಸಿದ ಹಾರದಿಂದ ಸಿದ್ದರಾಮಯ್ಯನವರನ್ನು ಸ್ವಾಗತಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 07, 2023 03:06 PM