ನನ್ನ ಬಗ್ಗೆ ಇಲ್ಲಸಲ್ಲದ ಮಾತಾಡುತ್ತಿರುವ ಸಿಟಿ ರವಿ ಶಿಕ್ಷಕರೊಬ್ಬರು ಕೆಆರ್​​ಎಸ್​​ನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಅಂತ ಹೇಳುವರೇ? ಹೆಚ್​​ಡಿಕೆ

ನನ್ನ ಬಗ್ಗೆ ಇಲ್ಲಸಲ್ಲದ ಮಾತಾಡುತ್ತಿರುವ ಸಿಟಿ ರವಿ ಶಿಕ್ಷಕರೊಬ್ಬರು ಕೆಆರ್​​ಎಸ್​​ನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಅಂತ ಹೇಳುವರೇ? ಹೆಚ್​​ಡಿಕೆ

ಅರುಣ್​ ಕುಮಾರ್​ ಬೆಳ್ಳಿ
| Updated By: ರಶ್ಮಿ ಕಲ್ಲಕಟ್ಟ

Updated on:Feb 07, 2023 | 5:33 PM

ಬೆಂಗಳೂರಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ ಅವರು ರವಿ ಬಗ್ಗೆ ತಾನು ಯಾವುದೇ ಕಾಮೆಂಟ್ ಮಾಡದಿದ್ದರೂ ಅವರಯ ತನ್ನನ್ನು ಕೆಣಕುತ್ತಿದ್ದಾರೆ ಎಂದರು.

ಬೆಂಗಳೂರು: ತಮ್ಮನ್ನು ಊರು ಬಿಟ್ಟವನು, ಕೇರಿ ಬಿಟ್ಟವನು ಅಂತ ಮಾತಾಡುತ್ತಿರುವ ಸಿಟಿ ರವಿ (CT Ravi) ಸಾಚಾನಾ? ಎಂದು ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದರು. ಬೆಂಗಳೂರಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಕುಮಾರಸ್ವಾಮಿ ಅವರು ರವಿ ಬಗ್ಗೆ ತಾನು ಯಾವುದೇ ಕಾಮೆಂಟ್ ಮಾಡದಿದ್ದರೂ ಅವರಯ ತನ್ನನ್ನು ಕೆಣಕುತ್ತಿದ್ದಾರೆ. ಅವರ ಎಷ್ಟು ಸಾಚಾ ಅಂತ ತನಗೆ ಗೊತ್ತಿದೆ. ಶಾಲಾ ಶಿಕ್ಷಕರೊಬ್ಬರು (school teacher) ಕೆಆರ್ ಎಸ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ ಅಂತ ರವಿ ಹೇಳುತ್ತಾರಾ? ಎಂದು ಕೇಳಿದ ಕುಮಾರಸ್ವಾಮಿ ಸುಖಾಸುಮ್ಮನೆ ನನ್ನ ತಂಟೆಗೆ ಬಂದರೆ ತಾವು ಸುಮ್ಮನಿರುವ ವ್ಯಕ್ತಿಯಲ್ಲ ಎಂದು ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 07, 2023 05:25 PM