BMTC Bus Service: ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಬಿಎಂಟಿಸಿ ಬಸ್ ಸಂಚಾರ ಸೇವೆಗೆ ಚಾಲನೆ ನೀಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್

|

Updated on: Mar 21, 2023 | 6:18 PM

ಬಸ್ ಸೇವೆಗೆ ಚಾಲನೆ ನೀಡಿದ ಬಳಿಕ ಸುಧಾಕರ್ ಕೊಂಚ ದೂರದವರಗೆ ಒಂದು ಬಸ್ ನಲ್ಲಿ ಪ್ರಯಾಣಿಸಿದರು. ಅವರೊಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಉಪಾಧ್ಯಕ್ಷ ನವೀನ್ ಕಿರಣ್ ಇದ್ದರು.

ಚಿಕ್ಕಬಳ್ಳಾಪುರ: ಬೆಂಗಳೂರು ನಗರದಿಂದ (Bengaluru city) ಸುಮಾರು 60 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ (Chikkaballapura) ಇನ್ನು ರಾಜಧಾನಿ ವ್ಯಾಪ್ತಿಗೆ ಬಂದಂತಯೇ. ಯಾಕೆ ಗೊತ್ತಾ? ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಬಸ್ ಸಂಚಾರಕ್ಕೆ ಇಂದು ಅರೊಗ್ಯ ಸಚಿವ ಡಾ ಕೆ ಸುಧಾಕರ್ ಚಾಲನೆ ನೀಡಿದರು. ಪ್ರಾಯೋಗಿಕವಾಗಿ ಎರಡು ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ. ಎರಡು ನಗರಗಳ ನಡುವಿನ ಪ್ರಯಾಣಕ್ಕೆ ಬಸ್ ದರವನ್ನು ರೂ. 60 ನಿಗದಿ ಮಾಡಲಾಗಿದ್ದು ಬಸ್ ಸೇವೆಗೆ ಚಾಲನೆ ನೀಡಿದ ಬಳಿಕ ಸುಧಾಕರ್ ಕೊಂಚ ದೂರದವರಗೆ ಒಂದು ಬಸ್ ನಲ್ಲಿ ಪ್ರಯಾಣಿಸಿದರು. ಅವರೊಂದಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಉಪಾಧ್ಯಕ್ಷ ನವೀನ್ ಕಿರಣ್ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on