Video: ‘ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ, ಯಾವುದೇ ದುರಭ್ಯಾಸ ಇರಲಿಲ್ಲ’: ಗೆಳೆಯ ದಿಲೀಪ್ ಅಗಲಿಕೆಗೆ ರವಿಶಂಕರ್ ಕಣ್ಣೀರು

Updated on: May 13, 2026 | 12:53 PM

ಕನ್ನಡ ಚಿತ್ರರಂಗದ ನಟ ದಿಲೀಪ್ ರಾಜ್ 47ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿಟ್‌ನೆಸ್ ಪ್ರಿಯರಾಗಿದ್ದ, ಯಾವುದೇ ದುಶ್ಚಟಗಳಿಲ್ಲದ ದಿಲೀಪ್ ರಾಜ್ ಅವರ ಅನಿರೀಕ್ಷಿತ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ. ರವಿಶಂಕರ್ ಗೌಡ ಅವರು ದಿಲೀಪ್ ರಾಜ್‌ರ ಕಷ್ಟದ ದಿನಗಳು ಹಾಗೂ ನಂತರದ ಯಶಸ್ಸನ್ನು ಸ್ಮರಿಸಿದ್ದಾರೆ.

ಬೆಂಗಳೂರು, ಮೇ 13: ಕನ್ನಡದ ಜನಪ್ರಿಯ ನಟ ದಿಲೀಪ್ ರಾಜ್ 47ನೇ ವಯಸ್ಸಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಧಾರಾವಾಹಿ ಹಾಗೂ ಹಲವು ಕನ್ನಡ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಅವರ ನಿಧನ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ದಿಲೀಪ್ ರಾಜ್ ಅವರ ಸ್ನೇಹಿತ ಹಾಗೂ ನಟ ರವಿಶಂಕರ್ ಗೌಡ ಅವರು ದಿಲೀಪ್ ರಾಜ್ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಫಿಟ್‌ನೆಸ್ ಫ್ರೀಕ್ ಆಗಿದ್ದರು ಮತ್ತು ಯಾವುದೇ ದುರಭ್ಯಾಸಗಳನ್ನು ಹೊಂದಿರಲಿಲ್ಲ ಎಂದು ರವಿಶಂಕರ್ ಗೌಡ ಹೇಳಿದ್ದಾರೆ. “ಆರೋಗ್ಯಕ್ಕೂ ಸಾವಿಗೂ ಸಂಬಂಧವೇ ಇಲ್ಲ ಅನ್ನುವಂತಾಗಿದೆ” ಎಂದು ಅವರು ದಿಲೀಪ್ ರಾಜ್ ಅವರ ಅನಿರೀಕ್ಷಿತ ಸಾವಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ತಮ್ಮ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿ, ನಂತರ ಟಿವಿ ನಿರ್ಮಾಣದ ಮೂಲಕ ಯಶಸ್ಸಿನ ಹಾದಿಯಲ್ಲಿದ್ದರು ಎಂದು ರವಿಶಂಕರ್ ಗೌಡ ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More