AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆಹ್ವಾನವಿಲ್ಲದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿ, ಹರಿದ ಜೇಬಿನಿಂದ 10 ರೂ. ತೆಗೆದು ವಧುವಿನ ಕೈಗಿಟ್ಟ ಮಾನಸಿಕ ಅಸ್ವಸ್ಥ

Video: ಆಹ್ವಾನವಿಲ್ಲದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿ, ಹರಿದ ಜೇಬಿನಿಂದ 10 ರೂ. ತೆಗೆದು ವಧುವಿನ ಕೈಗಿಟ್ಟ ಮಾನಸಿಕ ಅಸ್ವಸ್ಥ

ನಯನಾ ರಾಜೀವ್
|

Updated on: May 28, 2026 | 8:13 AM

Share

ಅಸ್ಸಾಂನಲ್ಲಿ ನಡೆದ ಮದುವೆಯೊಂದರಲ್ಲಿ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥ ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಅವರು ಊಟ ಮಾಡಿದ್ದರು. ಆ ವ್ಯಕ್ತಿಯ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.

ಗುವಾಹಟಿ, ಮೇ 28: ಅಸ್ಸಾಂನಲ್ಲಿ ನಡೆದ ಮದುವೆಯೊಂದರಲ್ಲಿ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥ ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಅವರು ಊಟ ಮಾಡಿದ್ದರು. ಆ ವ್ಯಕ್ತಿಯ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.

ಆದರೆ, ಊಟ ಮುಗಿಸಿ ಅಲ್ಲಿಂದ ಹೊರಡುವ ಮುನ್ನ ಆ ವ್ಯಕ್ತಿ ಮಾಡಿದ ಕೆಲಸ ಎಲ್ಲರ ಹೃದಯ ಮುಟ್ಟುವಂತಿತ್ತು. ಆತ ತನ್ನ ಹರಿದ ಜೇಬಿನಿಂದ ಅತ್ಯಂತ ಜಾಗರೂಕತೆಯಿಂದ ಹತ್ತು ರೂಪಾಯಿಯ ಮುದ್ದೆಯಾಗಿದ್ದ ನೋಟನ್ನು ಹೊರಗೆ ತೆಗೆದು, ಅಲ್ಲಿಯೇ ಇದ್ದ ನವವಧುವಿನ ಕೈಯಲ್ಲಿ ಅತ್ಯಂತ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟು ಹೋಗಿದ್ದಾರೆ.
ಅವರ ಈ ನಿಸ್ವಾರ್ಥ ನಡೆ ಮತ್ತು ಮುಗ್ಧ ಪ್ರೀತಿಯನ್ನು ಕಂಡು ವಧು ಸೇರಿದಂತೆ ಮದುವೆ ಮನೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ಬಂದವು. ಈ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More