Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ

| Updated By: shivaprasad.hs

Updated on: Nov 20, 2021 | 9:18 AM

ಆಂಧ್ರಪ್ರದೇಶ: ಅನಂತಪುರ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಹತ್ತು ಮಂದಿಯನ್ನು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ದೃಶ್ಯಗಳು ವೈರಲ್ ಆಗಿವೆ.

ಅನಂತಪುರ: ಆಂಧ್ರಪ್ರದೇಶದ ರಾಯಲಸೀಮೆ ಪ್ರಾಂತ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದುವರೆಗೆ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಹಲವೆಡೆ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆ ಮಾಡಲಾಗುತ್ತಿದ್ದು, ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್​​ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಹತ್ತು ಮಂದಿಯನ್ನು  IAF MI-17 ಮೂಲಕ ರಕ್ಷಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅನಂತಪುರ ಜಿಲ್ಲೆಯ ಚಿತ್ರಾವತಿ ನದಿಯಲ್ಲಿ ಸಿಲುಕಿಕೊಂಡದ್ದ 10 ಜನರನ್ನ ಭಾರೀ ಸಾಹಸ ಮಾಡಿ ಭಾರತೀಯ ವಾಯುಸೇನೆ ರಕ್ಷಿಸಿದೆ.

ಕಾರ್ಯಾಚರಣೆಯಲ್ಲಿ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿ ಶಾಮಕ ದಳ ಸೇರಿದಂತೆ ಇತರ ಇಲಾಖೆಗಳೂ ಭಾಗವಹಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಆಂಧ್ರಪ್ರದೇಶದಲ್ಲಿ ಮಳೆಗೆ ಇದುವರೆಗೆ ಒಟ್ಟಾರೆ 17ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ರಾಯಲಸೀಮೆ ಪ್ರಾಂತ್ಯದ ಜಿಲ್ಲೆಗಳಾದ ಚಿತ್ತೂರು, ಕಡಪ, ಕರ್ನೂಲು, ಅನಂತಪುರದಲ್ಲಿ ಭಾರಿ ಮಳೆಯಾಗಿದೆ. ಇದುವರೆಗೆ ಸುಮಾರು ನೂರಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಪರಿಹಾರ ಕಾರ್ಯಾಚರಣೆ ಸಾಗುತ್ತಿದೆ.


ಇದನ್ನೂ ಓದಿ:

Andhra Pradesh Rain: ಮಳೆಗೆ ನಲುಗಿದ ರಾಯಲಸೀಮೆ ಪ್ರಾಂತ್ಯ; ಒಟ್ಟು 17 ಮಂದಿ ಸಾವು, 100ಕ್ಕೂ ಅಧಿಕ ಜನ ನಾಪತ್ತೆ

ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ