Andhra Pradesh Rain: ಮಳೆಗೆ ನಲುಗಿದ ರಾಯಲಸೀಮೆ ಪ್ರಾಂತ್ಯ; ಒಟ್ಟು 17 ಮಂದಿ ಸಾವು, 100ಕ್ಕೂ ಅಧಿಕ ಜನ ನಾಪತ್ತೆ
ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ ಮಳೆಗೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಒಟ್ಟಾರೆ 17 ಮಂದಿ ದುರ್ಮರಣಕ್ಕೀಡಾಗಿದ್ದು, 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ,
ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ ಮಳೆಗೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಒಟ್ಟಾರೆ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ದುರ್ಮರಣಕ್ಕೀಡಾಗಿದ್ದಾರೆ. 18 ಜನ ನಾಪತ್ತೆಯಾಗಿದ್ದು, ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ (ಶುಕ್ರವಾರ, ನವೆಂಬರ್ 19) ಸುರಿದ ಭಾರಿ ಮಳೆಗೆ ಪರ್ವಾಹ ಪರಿಸ್ಥಿತಿ ಉಂಟಾಗಿದೆ. ರಾಜಾಂಪೇಟ್ ಪ್ರದೇಶದಲ್ಲಿ ಪರಿಹಾರ ಕಾರ್ಯಾವಚರಣೆ ನಡೆಯುತ್ತಿದ್ದು, ಇದುವರೆಗೆ 12 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಂದಪಲ್ಲೆ, ಅಕೆಪಡು ಹಾಗೂ ನಂದಲೂರ್ ಗ್ರಾಮದಲ್ಲಿ ಬಸ್ಗಳು ಸಿಲುಕಿಕೊಂಡಿದ್ದವು. ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್ನ ಟಾಪ್ ಮೇಲೆ ಹತ್ತಿ ಜೀವ ಉಳಿಸಿಕೊಳ್ಳು ಪ್ರಯತ್ನಿಸಿದರು. ಪ್ರವಾಹಕ್ಕೆ ಕೊಚ್ಚಿಹೋದವರಲ್ಲಿ ಕೆಲವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ. ಅದಾಗ್ಯೂ ಮೂವತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಚೆಯ್ಯೇರು ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ಅನ್ನಮಯ್ಯ ಅಣೆಕಟ್ಟು ಭರ್ತಿಯಾಗಿದೆ. ಇದರಿಂದ ನೀರನ್ನು ಹೊರಬಿಡಲಾಗುತ್ತಿದ್ದು, ಸಮೀಪದ ಗ್ರಾಮಗಳಾದ ಗುಂಡ್ಲೂರು, ಶೇಷಮಂಬಾಪುರಮ್, ಮಂದಪಲ್ಲಿ, ನಂದಲೂರ್, ರಾಜಂಪೇಟ್ ಮತ್ತು ಇತರ ಸ್ಥಳಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಕೊಚ್ಚಿ ಹೋದ ಬಸ್ ಹಾಗೂ ಉಳಿದ ಎರಡು ಬಸ್ಗಳ ಟಾಪ್ ಮೇಲೆ ಜನರು ಜೀವ ಉಳಿಸಿಕೊಳ್ಳಲು ಹತ್ತಿರುವ ವಿಡಿಯೋಗಳು ವೈರಲ್ ಆಗಿವೆ.
Atleast 3 people, including the conductor of a #RTCbus and 2 passenger in the vehicle, were reportedly washed away in gushing waters #Flashfloods of #Cheyyeru stream in #Rajampet mandal of #Kadapa district.#KadapaFloods #KadapaRains #Andhrapradeshrains pic.twitter.com/sRAOaqxf1t
— Surya Reddy (@jsuryareddy67) November 19, 2021
#RainFury: Passengers climbs @apsrtc bus caught in flood water and awaiting for help at Ramapuram village Rajampet mandal #Kadapa district.#AndhraPradesh#Rains pic.twitter.com/tiOeoHgayd
— Phanindra Papasani (@PhanindraP_TNIE) November 19, 2021
ಮತ್ತೊಂದು ಘಟನೆಯಲ್ಲಿ ಅನಂತಪುರ ಜಿಲ್ಲೆಯ ವೆಲ್ದುರ್ತಿ ಗ್ರಾಮದಲ್ಲಿ ಚಿತ್ರಾವತಿ ನದಿಯ ಪ್ರವಾಹದಿಂದ ಸಿಲುಕಿಕೊಂಡಿದ್ದ 10 ಮಂದಿಯನ್ನು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ಗಳ ಮುಖಾಂತರ ರಕ್ಷಿಸಲಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿ ಶಾಮಕ ದಳ ಸೇರಿದಂತೆ ಇತರ ಇಲಾಖೆಗಳೂ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.
#APPolice Rescue Operations: 10 people stranded in Chitravathi river, #Anantapur District were Airlifted & #Rescue d with the help of #IndianAirforce chopper. NDRF,SDRF,Fire,Revenue Depts & Swimmers also participated in the operation. Special thanks to @IAF_MCC for saving lives. pic.twitter.com/HUpHRoUXrT
— Andhra Pradesh Police (@APPOLICE100) November 19, 2021
ತಿರುಪತಿಯಲ್ಲೂ ಮಳೆಯಿಂದಾಗಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದು, ಘಾಟ್ಗಳು ಕ್ಲೋಸ್ ಆಗಿವೆ. ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 15,000 ಯಾತ್ರಾರ್ಥಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಉಚಿತ ಆಹಾರ ಮತ್ತು ವಸತಿ ನೀಡುತ್ತಿದೆ. ಇಂದು ದೇವಸ್ಥಾನವನ್ನು ದರ್ಶನಕ್ಕೆ ಕ್ಲೋಸ್ ಮಾಡಲಾಗಿದ್ದು, ನಾಳೆ ತೆರೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ:
Tirupathi: ತಿರುಪತಿಯಲ್ಲಿ ಪ್ರವಾಹದ ಪರಿಸ್ಥಿತಿ, ಗುಡ್ಡಗಳಿಂದ ಭೋರ್ಗರೆಯುತ್ತಿರುವ ನೀರು; ವಿಡಿಯೋ ನೋಡಿ
Karnataka Rain: ಕರ್ನಾಟಕದಲ್ಲಿ ಇಂದಿನಿಂದ 4 ದಿನ ಮಳೆ ಆರ್ಭಟ; ಹಲವೆಡೆ ಶಾಲಾ-ಕಾಲೇಜಿಗೆ ರಜೆ ಘೋಷಣೆ