ಪತ್ನಿಯೊಂದಿಗೆ ವಿಶ್ವ ಪರ್ಯಟನೆಗೆ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

ಪತ್ನಿಯೊಂದಿಗೆ ವಿಶ್ವ ಪರ್ಯಟನೆಗೆ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ
ಕೆ.ಆರ್.ವಿಜಯನ್ (ಕೃಪೆ: ಫೇಸ್ ಬುಕ್)

ವಿಜಯನ್ ಚಿಕ್ಕವರಿದ್ದಾಗಲೇ  ಪ್ರವಾಸ ಮಾಡುವ ಹುಚ್ಚಿತ್ತು. ಅವರು ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುತ್ತಿದ್ದರು.ಆಮೇಲೆ  ದೂರದ ಸ್ಥಳಗಳಿಗೆ ಪ್ರವಾಸ ಮಾಡಲು ಶುರು ಮಾಡಿದರು. ಮೊದಲು ದೇಶದೊಳಗೆ ಮತ್ತು ನಂತರ ವಿದೇಶಗಳಿಗೆ.

TV9kannada Web Team

| Edited By: Rashmi Kallakatta

Nov 19, 2021 | 8:00 PM

ಕೊಚ್ಚಿ: ಕೊಚ್ಚಿ (Kochi) ಮೂಲದ ಟೀ ಸ್ಟಾಲ್ ಮಾಲೀಕ ಕೆ ಆರ್ ವಿಜಯನ್ (K R Vijayan) ಶುಕ್ರವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 71 ವರ್ಷ ಆಗಿತ್ತು. ಟೀ ಸ್ಟಾಲ್ ನಡೆಸಿ ಸಂಪಾದಿಸಿದ ಹಣದಲ್ಲಿ ಅವರು ಪತ್ನಿಯೊಂದಿಗೆ ಪ್ರಪಂಚದಾದ್ಯಂತದ ಪ್ರವಾಸಗಳನ್ನು ಮಾಡಿದ್ದು ಜಾಗತಿಕ ಖ್ಯಾತಿಯನ್ನು ಗಳಿಸಿದ್ದರು. ವಿಜಯನ್ ಮತ್ತು ಅವರ ಪತ್ನಿ ಮೋಹನ ಅವರು ‘ಶ್ರೀ ಬಾಲಾಜಿ ಕಾಫಿ ಹೌಸ್'(Sri Balaji Coffee House) ಎಂಬ ಸಾಧಾರಣ ಟೀ ಸ್ಟಾಲ್ ಅನ್ನು ಹೊಂದಿದ್ದರು. ಈ ಟೀ ಸ್ಟಾಲ್ ನಲ್ಲಿ ಟೀ ಮಾರಿ ಸಿಕ್ಕಿದ ಗಳಿಕೆಯಿಂದ ತಮ್ಮ ವಿಶ್ವ ಪ್ರವಾಸಗಳಿಗೆ ಹಣವನ್ನು ಹೊಂದಿಸಿ ವಿದೇಶ ಸುತ್ತುವ ಮೂಲಕ ನಂತರ ಪ್ರಸಿದ್ಧರಾದರು. ದಂಪತಿಗಳು ಇತ್ತೀಚೆಗಷ್ಟೇ ರಷ್ಯಾಕ್ಕೆ  ಕುಟುಂಬ ಪ್ರವಾಸ ಹೋಗಿ ಮರಳಿದ್ದರು. ಇಬ್ಬರೂ ಟೀ ಸ್ಟಾಲ್‌ನಿಂದ ತಮ್ಮ ಗಳಿಕೆಯಿಂದ ದಿನಕ್ಕೆ 300 ರೂಪಾಯಿಗಳನ್ನು ಉಳಿಸುತ್ತಿದ್ದರು. 2007 ರಲ್ಲಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದು ಇದು ದೇಶದ ಹೊರಗಿನ ಅವರ ಮೊದಲ ಪ್ರಯಾಣ ಆಗಿತ್ತು. ಕಳೆದ 14 ವರ್ಷಗಳಲ್ಲಿ ಈ ದಂಪತಿ 26 ದೇಶಗಳಿಗೆ ಭೇಟಿ ನೀಡಿದ್ದರು. ದಂಪತಿಗಳು ಪ್ರವಾಸಕ್ಕೆ ಹಣ ನೀಡಲು ಸಣ್ಣ ಸಾಲವನ್ನೂ ತೆಗೆದುಕೊಳ್ಳುತ್ತಿದ್ದರು. ದಂಪತಿಗಳು ಪ್ರಪಂಚದಾದ್ಯಂತ ಪ್ರಯಾಣಿಸುವ ಸುದ್ದಿ ವೈರಲ್ ಆಗುತ್ತಿದ್ದಂತೆ, ಅವರು ಉದ್ಯಮಿ ಆನಂದ್ ಮಹೀಂದ್ರಾ ಅವರಂತಹ ಪ್ರಾಯೋಜಕರನ್ನು ಪಡೆಯಲು ಪ್ರಾರಂಭಿಸಿದರು. ಅವರು 2019 ರಲ್ಲಿ ತಮ್ಮ ಆಸ್ಟ್ರೇಲಿಯಾದ ಭೇಟಿಯನ್ನು ಸಾಮಾಜಿಕ ಮಾಧ್ಯಮದಿಂದ ತಿಳಿದುಕೊಂಡ ನಂತರ ಆನಂದ್ ಮಹೀಂದ್ರಾ  ಪ್ರಾಯೋಜಕತ್ವ ನೀಡಿದರು. ಅವರ ಕೊನೆಯ ರಷ್ಯಾ ಪ್ರವಾಸವು ಅಕ್ಟೋಬರ್ 21 ರಂದು ಆಗಿದ್ದು ಅಕ್ಟೋಬರ್ 28 ರಂದು ವಾಪಸ್ ಆಗಿದ್ದರು. ಕೊವಿಡ್ ಲಾಕ್‌ಡೌನ್ ಕಾರಣ, ರಷ್ಯಾಕ್ಕೆ ಅವರ ಕೊನೆಯ ಪ್ರವಾಸವು ನವೆಂಬರ್-ಡಿಸೆಂಬರ್ 2019 ರಲ್ಲಿ ಆಗಿತ್ತು.

ವಿಜಯನ್ ಚಿಕ್ಕವರಿದ್ದಾಗಲೇ  ಪ್ರವಾಸ ಮಾಡುವ ಹುಚ್ಚಿತ್ತು. ಅವರು ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುತ್ತಿದ್ದರು.ಆಮೇಲೆ  ದೂರದ ಸ್ಥಳಗಳಿಗೆ ಪ್ರವಾಸ ಮಾಡಲು ಶುರು ಮಾಡಿದರು. ಮೊದಲು ದೇಶದೊಳಗೆ ಮತ್ತು ನಂತರ ವಿದೇಶಗಳಿಗೆ.   “ನಾನು ಯಾವಾಗಲೂ ಪ್ರಯಾಣಿಸಲು ಇಷ್ಟಪಡುತ್ತೇನೆ. ನಾನು ಕೇವಲ 12 ವರ್ಷದವನಿದ್ದಾಗ ನನ್ನ ತಂದೆ ನನ್ನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತು ನಾನು ಬೆಳೆದ ನಂತರ, ನಾನು ಮುನ್ನಾರ್, ತೆೇಕ್ಕಡಿ ಅಥವಾ ಕನ್ಯಾಕುಮಾರಿಯಂತ ಸುತ್ತಮುತ್ತಲಿನ ಸ್ಥಳಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ.

“ಹೊಸದನ್ನು ಕಲಿಯಲು ಅಥವಾ ನಾನು ಏನನ್ನಾದರೂ ಅನುಭವಿಸಿದ್ದೇನೆ ಎಂದು ಹೇಳಿಕೊಳ್ಳಲು ನಾನು ಪ್ರಯಾಣಿಸುವುದಿಲ್ಲ. ನಾನು ಇದನ್ನು ಮಾಡುತ್ತೇನೆ ಏಕೆಂದರೆ ನಾನು ಇದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಬೇಕು. ಪ್ರಪಂಚದ ಇತರ ಭಾಗಗಳು ಎಷ್ಟು ಸುಂದರವಾಗಿವೆ ಎಂಬುದರ ಕುರಿತು ಇನ್ನೊಬ್ಬ ವ್ಯಕ್ತಿಯ ಹೇಳುವುದನ್ನು ಕೇಳಿಸಿಕೊಳ್ಳಲು  ನನಗೆ ಆಸಕ್ತಿಯಿಲ್ಲ. ನಾನು ಅದನ್ನು ನೋಡಿ ಮತ್ತು ನಾನೇ ನಿರ್ಧರಿಸಲು ಬಯಸುತ್ತೇನೆ. ಮತ್ತು ನಾನು ಪ್ರೀತಿಸುವ ಮಹಿಳೆಯೊಂದಿಗೆ ಜಗತ್ತನ್ನು ನೋಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದೇನಿದೆ ಎಂದು ವಿಜಯನ್ ಹೇಳಿದ್ದರು.

ಇತ್ತೀಚೆಗೆ ‘ಒರು ಚಿರಿ ಇರು ಚಿರಿ ಬಂಪರ್ ಚಿರಿ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಂಪತಿ ಮುಂದಿನ ಪ್ರಯಾಣ ಜಪಾನ್  ದೇಶಕ್ಕೆ ಎಂದು ಹೇಳಿದ್ದರು.ತನ್ನ 69 ವರ್ಷದ ಪತ್ನಿ ಮೋಹನ ಅವರೊಂದಿಗೆ ವಿಯೆಟ್ನಾಂ ಮತ್ತು ಕಾಂಬೋಡಿಯಾದ ನಂತರ ಜಪಾನ್‌ ಪ್ರವಾಸ ಮಾಡಲು ಅವರು ಬಯಸಿದ್ದರು. ದಂಪತಿ ಕಳೆದ ವರ್ಷ ‘ಚಾಯ  ವಿಟ್ಟು ವಿಜಯನ್ಡೇಯುಂ ಮೋಹನಯುಡೆಯುಂ ಲೋಕ ಸಂಚಾರಙಳ್’  (ಚಹಾ ಮಾರಿ ವಿಜಯನ್ ಮತ್ತು ಮೋಹನ ಅವರ  ಪ್ರಪಂಚ ಸುತ್ತಾಟ) ಎಂಬ ಪುಸ್ತಕವನ್ನು ಹೊರತಂದಿದ್ದರು.

ವಾರಕ್ಕೆ ಎರಡು ಬಾರಿಯಾದರೂ ನನ್ನ ಪರಿಪ್ಪು ವಡಾ, ಪಳಂ ಪೊರಿ ಮತ್ತು ಚಾಯ್ ಒದಗಿಸುವವರು, ಪ್ರಯಾಣದ ಕಥೆಗಳನ್ನು ಹೇಳುವವರು, ಯುವ-ಹೃದಯದ ಗೆಳೆಯ, ಎರ್ನಾಕುಲಂನ ಜಗತ್ತು ಸುತ್ತುವ ಟೀ-ಮಾರಾಟಗಾರ, ವಿಜಯನ್ ನಿಧನರಾದರು. ಅವರು ರಷ್ಯಾದಿಂದ ಹಿಂತಿರುಗಿದ್ದರು, ಅಲ್ಲಿ ಅವರು ಪುಟಿನ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು ಎಂದು ಖ್ಯಾತ ಬರಹಗಾರ ಎನ್ ಎಸ್ ಮಾಧವನ್ ಟ್ವೀಟ್ ಮಾಡಿದ್ದಾರೆ.

ವಿಜಯನ್ ಅವರು ಪತ್ನಿ, ಇಬ್ಬರು ಪುತ್ರಿಯರಾದ ಶಶಿಕಲಾ, ಉಷಾ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ ಅಂತ್ಯ ಸಂಸ್ಕಾರ ನಡೆದಿದೆ.

ಇದನ್ನೂ ಓದಿ: ವೀರ್ ದಾಸ್ ಅವರ ಟು ಇಂಡಿಯಾಸ್ ವಿಷಯ ಟೀಕಿಸಿದ ಚೇತನ್ ಭಗತ್‌ಗೆ ಟ್ವೀಟಿಗರ ತಪರಾಕಿ

Follow us on

Related Stories

Most Read Stories

Click on your DTH Provider to Add TV9 Kannada