AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಪ್ರಯಾಣಿಕರಿಗೆ ಸಿಹಿ‌ ಸುದ್ದಿ; ಕೊರೊನಾ ಕಾರಣದಿಂದ ನಿಂತಿದ್ದ ಈ ಸೇವೆ ಮತ್ತೆ ಆರಂಭವಾಗಲಿದೆ!

Indian Railways: ಕೊರೊನಾ ಕಾರಣದಿಂದ ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ರೈಲ್ವೆ ಇಲಾಖೆ ಮಾಡಿತ್ತು. ಇದೀಗ ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವುದರಿಂದ ಮತ್ತೆ ಹಳೆಯ ಸೇವೆಗಳನ್ನು ನೀಡಲು ಮುಂದಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಸಿಹಿ‌ ಸುದ್ದಿ; ಕೊರೊನಾ ಕಾರಣದಿಂದ ನಿಂತಿದ್ದ ಈ ಸೇವೆ ಮತ್ತೆ ಆರಂಭವಾಗಲಿದೆ!
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on:Nov 20, 2021 | 9:56 AM

Share

ಕೊರೊನಾ ಎರಡನೇ ಅಲೆಯ ನಂತರ ರೈಲ್ವೆ ಇಲಾಖೆ (Railways) ತನ್ನ ಸೇವೆಯಲ್ಲಿ ಹಲವು ಬದಲಾವಣೆ ಮಾಡಿತ್ತು. ಇದೀಗ ಜನಜೀವನ ಸಹಜಸ್ಥಿತಿಗೆ ಬರುತ್ತಿರುವುದರಿಂದ ತನ್ನ ಹಳೆಯ ಸೇವೆಗಳನ್ನು ಮರುಪ್ರಾರಂಭಹಗೊಳಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಅದು ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಬೇಯಿಸಿದ ಊಟದ ಸೇವೆಯನ್ನು (Cooked Meal) ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಸಾಂಕ್ರಾಮಿಕ ರೋಗದ ಕಾತರಣದಿಂದ ಹೇರಲಾಗಿದ್ದ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗಿರುವುದರಿಂದ, ಸೇವೆಗಳನ್ನು ಪುನಃಸ್ಥಾಪಿಸಿ, ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಊಟವನ್ನು ಪುನರಾರಂಭಿಸಲು ರೈಲ್ವೆ ಮಂಡಳಿಯು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವನ್ನು (Indian Railway Catering and Tourism Corporation- IRCTC) ಪತ್ರದಲ್ಲಿ ಕೇಳಿದೆ.

ರೈಲ್ವೆ ಸೇವೆಗಳನ್ನು ಈ ಹಿಂದಿನಂತೆ ನೀಡಲು ಪ್ರಯಾಣಿಕರಿಗೆ ಆಹಾರದ ಸೇವೆಯಲ್ಲಿ ಹೇರಲಾಗಿದ್ದ ನಿಯಮಗಳನ್ನು ಸಡಿಲಗೊಳಿಸಲು ಇಲಾಖೆ ನಿರ್ಧರಿಸಿದೆ. ಆದ್ದರಿಂದ ಪ್ರಯಾಣಿಕರಿಗೆ ಇನ್ನು ಮುಂದೆ ಬೇಯಿಸಿದ ಆಹಾರ ಈ ಮೊದಲಿನಂತೆ ಪ್ರಯಾಣದ ವೇಳೆ ಲಭ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದೇ ವೇಳೆ ಸಿದ್ಧ ಆಹಾರದ ಸೇವೆ ಈಗಿನಂತೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಬೇಯಿಸಿದ ಆಹಾರದ ಸೇವೆ ಡಿಸೆಂಬರ್ 1 ಅಥವಾ ಅದಕ್ಕಿಂತ ಮೊದಲೇ ಪ್ರಯಾಣಿಕರಿಗೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಈ ತಿಂಗಳ ಪ್ರಾರಂಭದಲ್ಲಿ ರೈಲ್ವೆಯು ಕೊರೊನಾ ಕಾಲದಲ್ಲಿ ಪ್ರಾರಂಭವಾಗಿದ್ದ ‘ವಿಶೇಷ ರೈಲುಗಳು’ ಎಂಬ ಹೆಸರನ್ನು ತೆಗೆದು, ಮೊದಲಿನಂತೆ ಸಾಮಾನ್ಯ ರೈಲುಗಳಾಗಿ ಸಂಚರಿಸಲಿವೆ ಎಂದು ತಿಳಿಸಿತ್ತು. ಅಲ್ಲದೇ ಈ ಹಿಂದಿದ್ದ ಮೂಲ ಟಿಕೆಟ್ ಬೆಲೆಯನ್ನು ಮತ್ತೆ ನಿಗದಿಗೊಳಿಸಲು ರೈಲ್ವೆ ನಿರ್ಧರಿಸಿದೆ. ಈ ಮೂಲಕ ಮತ್ತೆ ಮೊದಲಿನಂತೆ ಸೇವೆ ನೀಡಲು ರೈಲ್ವೆ ಸಿದ್ಧತೆ ನಡೆಸಿದೆ.

ದೇಶದಲ್ಲಿ ಪ್ರತಿದಿನ ಸುಮಾರು 10,000- 15,000 ಕೇಸ್​ಗಳು ದಾಖಲಾಗುತ್ತಿವೆ. ಪಾಸಿಟಿವಿಟಿ ಪ್ರಮಾಣ ಸ್ಥಿರದಲ್ಲಿರುವುದರಿಂದ ರೈಲ್ವೆ ಸಾಮಾನ್ಯ ನಿಯಮಗಳನ್ನು ಮರುಅನುಷ್ಠಾನಗೊಳಿಸುತ್ತಿದೆ. ಇತ್ತೀಚೆಗಷ್ಟೇ  ದೇಶಿ ವಿಮಾನಗಳಲ್ಲೂ ಬೇಯಿಸಿದ ಆಹಾರವನ್ನು ನೀಡಲು ನಾಗರಿಕ ಸಚಿವಾಲಯ ಅನುಮೋದನೆ ನೀಡಿತ್ತು.

ಇದನ್ನೂ ಓದಿ:

Kerala Rain: ಕೇರಳದಲ್ಲಿ ಭಾರೀ ಮಳೆಯಿಂದ ಉಕ್ಕಿ ಹರಿದ ಪಂಬಾ ನದಿ; ಇಂದು ಶಬರಿಮಲೆ ಯಾತ್ರೆ ಸ್ಥಗಿತ

Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ

Published On - 9:51 am, Sat, 20 November 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ