ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್ ಆಗದ ಟ್ರಾಫಿಕ್ ಜಾಮ್
ರಾಷ್ಟ್ರೀಯ ಹೆದ್ದಾರಿ 48 ತುಮಕೂರು-ಶಿರಾ ಮಾರ್ಗದ ಐದು ಕಡೆ ಟ್ರಾಫಿಕ್ ಜಾಮ್ ಆಗಿದೆ. ಭಾನುವಾರ ಮಧ್ಯಾಹ್ನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಇನ್ನುವರೆಗೂ ಕ್ಲಿಯರ್ ಆಗಿಲ್ಲ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48 ತುಮಕೂರು-ಶಿರಾ (Tumakur-Sira) ಮಾರ್ಗದ ಐದು ಕಡೆ ಟ್ರಾಫಿಕ್ ಜಾಮ್ (Traffic Jam) ಆಗಿದೆ. ಭಾನುವಾರ ಮಧ್ಯಾಹ್ನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಟ್ರಾಫಿಕ್ ಜಾಮ್ ಆಗಿದ್ದು, ಇನ್ನುವರೆಗೂ ಕ್ಲಿಯರ್ ಆಗಿಲ್ಲ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಆಂಬುಲೆನ್ಸ್ಗಳು ಸಹ ಟ್ರಾಫಿಕ್ನಲ್ಲಿ ಸಿಲುಕಿದ್ದವು. ಐದು ಕಡೆಗಳಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ.
ಹಬ್ಬ ಮುಗಿಸಿ ಜನರು ಭಾನುವಾರ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದ ಹಿನ್ನೆಲೆಯಲ್ಲಿ 2-3 ಕಿ.ಮಿ. ಉದ್ದ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಬೆಳಗ್ಗೆ 5 ಗಂಟೆಗೆ ತಮಕೂರಿಗೆ ಬಂದ ವಾಹನಗಳು, ಬೆಂಗಳೂರು ಪ್ರವೇಶಿಸಲು ಜನರು ಪರದಾಡಿದರು. ತುಮಕೂರಿನ ಊರುಕೆರೆ ಬಳಿ, ಬೆಳ್ಳಾವಿ ಕ್ರಾಸ್ ಬಳಿ, ನೆಲಹಾಲ್ ಸಮೀಪ, ಕಳ್ಳಂಬೆಳ್ಳ ಸಮೀಪದಲ್ಲಿ ಎರಡು ಸೇತುವೆ ಕಾಮಗಾರಿ ನಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ