Video: ರಸ್ತೆ ದಾಟಲು ಪರದಾಡಿದ ಕಾಡಾನೆಗಳ ಹಿಂಡು!

Edited By:

Updated on: Aug 19, 2026 | 12:47 PM

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಬಳಿ ಸುಮಾರು 10 ಕಾಡಾನೆಗಳ ಹಿಂಡು ರಸ್ತೆ ದಾಟಲು ಪರದಾಡಿದ ಘಟನೆ ನಡೆದಿದೆ. ವಾಹನ ಸವಾರರು ಸೈಲೆಂಟ್ ಆಗಿ ವಾಹನಗಳನ್ನು ನಿಲ್ಲಿಸಿ ಆನೆಗಳು ಸುಲಭವಾಗಿ ರಸ್ತೆ ದಾಟಲು ನೆರವಾದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೀಗ ವೀಡಿಯೋ ವೈರಲ್ ಆಗುತ್ತಿದೆ.

ಹಾಸನ, ಆಗಸ್ಟ್ 19: ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಬಳಿ ಸುಮಾರು 10 ಕಾಡಾನೆಗಳಿದ್ದ ಗುಂಪೊಂದು ರಸ್ತೆ ದಾಟಲು ಪರದಾಡಿದ ರೋಚಕ ಘಟನೆ ನಡೆದಿದೆ. ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಗಜಪಡೆ ರಸ್ತೆ ದಾಟಲಾಗದೆ ಕೆಲಕಾಲ ಕಾಯುತ್ತಾ ನಿಂತಿದ್ದವು. ಇದನ್ನು ಗಮನಿಸಿದ ವಾಹನ ಸವಾರರು ತಕ್ಷಣವೇ ಎರಡೂ ಬದಿಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಸೈಲೆಂಟ್ ಆಗಿ ನಿಂತು ಆನೆಗಳಿಗೆ ಹಾದಿ ಮಾಡಿಕೊಟ್ಟಿದ್ದಾರೆ. ನಂತರ ಕಾಡಾನೆಗಳು ನಿಧಾನವಾಗಿ ರಸ್ತೆ ದಾಟಿ ಅರಣ್ಯ ಸೇರಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸವಾರರ ಈ ತಾಳ್ಮೆ ಮತ್ತು ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 19, 2026 12:46 PM
Loading...
Unable to load recommendations.
Follow Us