ಹೇಗಿತ್ತು ನೋಡಿ ಅಪರ್ಣಾ ಕೊನೆಯ ದಿನಗಳು; ಕ್ಯಾನ್ಸರ್ ಬಂದರೂ ನಗು ನಗುತ್ತಲೇ ಇದ್ದರು
ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು. ಅವರ ಕೊನೆಯ ದಿನದ ವಿಡಿಯೋ ಇಲ್ಲಿದೆ.
ಅಪರ್ಣಾ ಅವರಿಗೆ ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಯಿತು. ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರು ಗುರುವಾರ (ಜುಲೈ 12) ನಿಧನ ಹೊಂದಿದ್ದಾರೆ. ಅವರು ಕಿಮೋ ಥೆರಪಿಗಾಗಿ ಕೂದಲು ಕತ್ತರಿಸಿಕೊಂಡಿದ್ದರು. ಆಗಲೂ ಅವರು ನಗು ನಗುತ್ತಲೇ ಇದ್ದರು. ಗಾಯಕಿಯರಾದ ಸುನೀತಾ ಹಾಗೂ ಬಿಆರ್ ಛಾಯಾ ಅಪರ್ಣಾಗೆ ಆಪ್ತರಾಗಿದ್ದರು. ಅವರ ಜೊತೆ ಕುಳಿತು ನಗು ನಗುತ್ತಾ ಮಾತನಾಡಿದ್ದು ಅಪರ್ಣಾ. ‘ಹೇಗಿದೆ ನನ್ನ ಹೊಸ ಹೇರ್ಸ್ಟೈಲ್’ ಎಂದು ಅಪರ್ಣಾ ಕೇಳಿದ್ದರು. ಆ ಬಳಿಕ ಸುನೀತಾ ಹಾಗೂ ಛಾಯಾ ಅವರು ಅಪರ್ಣಾಗೆ ಹಾಡುಗಳನ್ನು ಹಾಡಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.