‘ಅವತಾರ ಪುರುಷ’ ಚಿತ್ರದ ಓವರ್ ಆ್ಯಕ್ಟಿಂಗ್ ಅನಿಲ ಪಾತ್ರ ಹುಟ್ಟಿದ್ದು ಹೀಗೆ

| Updated By: ರಾಜೇಶ್ ದುಗ್ಗುಮನೆ

Updated on: Apr 08, 2022 | 8:00 AM

ಅವತಾರ ಪುರುಷ ಚಿತ್ರದಲ್ಲಿ ಮಾಟ-ಮಂತ್ರದ ಬಗ್ಗೆಯೂ ಹೇಳಲಾಗಿದೆ. ಈ ವಿಚಾರವನ್ನು ಟೀಸರ್​ನಲ್ಲಿ ಅನಾವರಣ ಮಾಡಲಾಗಿದೆ. ಈ ಆಲೋಚನೆ ಬಂದಿದ್ದು ಹೇಗೆ ಎಂಬುದನ್ನು ಸಿಂಪಲ್ ಸುನಿ ವಿವರಿಸಿದ್ದಾರೆ.

‘ಅವತಾರ ಪುರುಷ’ ಚಿತ್ರದ ಓವರ್ ಆ್ಯಕ್ಟಿಂಗ್ ಅನಿಲ ಪಾತ್ರ ಹುಟ್ಟಿದ್ದು ಹೀಗೆ

ಸಿಂಪಲ್ ಸುನಿ (Simple Suni) ಅವರು ನಿರ್ದೇಶನಕ್ಕೆ ಇಳಿದರೆ ಅಲ್ಲೊಂದಷ್ಟು ಮನರಂಜನೆ ಇದ್ದೇ ಇರುತ್ತದೆ. ಈಗ ಅವರು ಆ್ಯಕ್ಷನ್​ ಕಟ್ ಹೇಳಿರುವ ‘ಅವತಾರ ಪುರುಷ’ ಸಿನಿಮಾ (Avatara Purusha Movie) ತೆರೆಗೆ ಬರುತ್ತಿದೆ. ಮೇ 6ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶರಣ್​ (Sharan) ಅವರು ಓವರ್ ಆ್ಯಕ್ಟಿಂಗ್ ಅನಿಲ ಎಂಬ ಪಾತ್ರ ಮಾಡಿದ್ದಾರೆ. ಈ ಪಾತ್ರದ ಐಡಿಯಾ ಹುಟ್ಟಿಕೊಳ್ಳಲು ಒಂದು ಕಾರಣ ಇದೆ. ಅದೇನು ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಚಿತ್ರದ ನಿರ್ದೇಶಕ ಸಿಂಪಲ್​ ಸುನಿ. ಈ ಚಿತ್ರದಲ್ಲಿ ಮಾಟ-ಮಂತ್ರದ ಬಗ್ಗೆಯೂ ಹೇಳಲಾಗಿದೆ. ಈ ವಿಚಾರವನ್ನು ಟೀಸರ್​ನಲ್ಲಿ ಅನಾವರಣ ಮಾಡಲಾಗಿದೆ. ಈ ಆಲೋಚನೆ ಬಂದಿದ್ದು ಹೇಗೆ ಎಂಬುದನ್ನು ಸಿಂಪಲ್ ಸುನಿ ವಿವರಿಸಿದ್ದಾರೆ. ಸಿನಿಮಾ ಬಗ್ಗೆ ಅವರು ಏನೆಲ್ಲ ಹೇಳಿಕೊಂಡರು ಎನ್ನುವುದನ್ನು ತಿಳಿಯಲು ವಿಡಿಯೋ ನೋಡಿ.

ಇದನ್ನೂ ಓದಿ: ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್​ನಲ್ಲಿ ಮತ್ತೊಂದು ಮುಖ ಅನಾವರಣ

‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್​ಸಿಬಿ’ ಮ್ಯಾಚ್​; ಸಿಂಪಲ್ ಸುನಿಯ ಹೊಸ ಐಡಿಯಾ

Follow us on