‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ ಹೀಗಿತ್ತು

Updated on: Jul 25, 2025 | 2:26 PM

ರಾಜ್​ಕುಮಾರ್ ಅವರು ವೀರಪ್ಪನ್​ನಿಂದ ಕಿಡ್ನ್ಯಾಪ್​ಗೆ ಒಳಗಾಗಿದ್ದು ಗೊತ್ತೇ ಇದೆ. ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. ಈ ಘಟನೆ ನಡೆಯುವಾಗ ಏನಾಗಿತ್ತು ಎಂಬುದನ್ನು ಅವರ ಅಳಿಯ ಗೋವಿಂದ ರಾಜು ಅವರು ಹೇಳಿದ್ದಾರೆ. ಅವರು ಈ ಘಟನೆಯ ವಿವರ ನೀಡಿದ್ದಾರೆ .

ರಾಜ್​ಕುಮಾರ್ ಅವರು ಈ ಮೊದಲು ವೀರಪ್ಪನ್ ಅವರಿಂದ ಅಪಹರಣಕ್ಕೆ ಒಳಗಾದರು. ಈ ವೇಳೆ ಅವರ ಅಳಿಯ ಗೋವಿಂದ ರಾಜು ಕೂಡ ಇದ್ದರು. ಅವರನ್ನೂ ರಾಜ್​ಕುಮಾರ್ ಜೊತೆ ಕರೆದುಕೊಂಡು ಹೋಗಲಾಯಿತು. ರಾಜ್​​ಕುಮಾರ್ ಅವರನ್ನು ವೀರಪ್ಪನ್ ಕರೆದಾಗ ಸ್ವಲ್ಪವೂ ವಿರೋಧ ತೋರಿಸಲೇ ಇಲ್ಲ. ಬದಲಾಗಿ ‘ಕರೆಯುತ್ತಿದ್ದಾನೆ, ಬನ್ನಿ ಹೋಗೋಣ’ ಎಂದರಂತೆ. ಈ ಪ್ರಯಾಣ ಮುಂದಿನ ಸುದೀರ್ಘ 118 ದಿನಗಳ ಕಾಲ ನಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More