ರಾಜ್ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ; ಮತ್ತೆ ಪಟಾಕಿ ಹೊಡೆಯಿರಿ ಎಂದ ಮನೆಯವರು
ಮುಖ್ಯಾಂಶಗಳು
- ಡಾ.ರಾಜ್ಕುಮಾರ್ ಸಂಬಂಧಿ ಮನೆಯಲ್ಲಿ ಸ್ಫೋಟ ಪ್ರಕರಣ
- ಇಬ್ಬರು ಯುವಕರನ್ನು ಮನೆಯ ಬಳಿ ಕರೆತಂದು ಸ್ಥಳ ಮಹಜರು
- ಕೆಲಕಾಲ ಮನೋಜ್ಞ ಮನೆಯ ಎದುರು ಹೈಡ್ರಾಮಾ
ಡಾ.ರಾಜಕುಮಾರ್ ಸಂಬಂಧಿ ಮನೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರಿನಲ್ಲಿ ಯುವಕರು ಪಟಾಕಿ ಹೊಡೆದಿರುವುದಾಗಿ ಹೇಳಿಕೊಂಡರೆ, ಕುಟುಂಬಸ್ಥರು ಇದನ್ನು ಒಪ್ಪದೆ ಬೇರೆ ಏನೋ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಡಾ.ರಾಜಕುಮಾರ್ ಸಂಬಂಧಿಕರ ಮನೆ ಮುಂದೆ ಹೈಡ್ರಾಮಾಕ್ಕೆ ಕಾರಣವಾಗಿದೆ.
ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ಡಾ.ರಾಜಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಹಿನ್ನೆಲೆ ಕೆಲ ಯುವಕರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರಿಗಾಗಿ ಕರೆತಂದಿದ್ದಾರೆ. ಮೂರ್ನಾಲ್ಕು ಆಟೋ ಬಾಂಬ್‌ಗಳನ್ನ ಜೋಡಿಸಿ ಸ್ಫೋಟಿಸಿರುವುದಾಗಿ ಹೇಳಿದ್ದಾರೆ. ಆದರೆ ರಾಜಕುಮಾರ್ ಸಂಬಂಧಿ ಕುಟುಂಬದವರು ಇದನ್ನು ಒಪ್ಪಲು ತಯಾರಿಲ್ಲ. ಹಾಗಾದರೆ ಆ ಪಟಾಕಿಯನ್ನು ಮತ್ತೆ ಹೊಡೆದು ತೋರಿಸಿ. ಪಟಾಕಿ ಸ್ಫೋಟದಿಂದ ಬಾಗಿಲು, ಕಿಟಕಿ ಗಾಜು ಪುಡಿಪುಡಿಯಾಗಲು ಹೇಗೆ ಸಾಧ್ಯ. ಇದು ಕೇವಲ ಪಟಾಕಿಯಿಂದ ಆಗಿರಲು ಸಾಧ್ಯವಿಲ್ಲ, ಇದರ ಹಿಂದೆ ಬೇರೆ ಏನೋ ನಡೆದಿದೆ ಎಂದು ಕುಟುಂಬಸ್ಥರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಕಾಲ ಮನೋಜ್ಞ ಮನೆಯ ಎದುರು ಹೈಡ್ರಾಮಾ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
