ಬೆಂಗಳೂರು: ಡ್ರಗ್ಸ್ ನಶೆಯಲ್ಲಿದ್ದ ಆಫ್ರಿಕನ್ ಮೂಲದ ವ್ಯಕ್ತಿಯಿಂದ ರಸ್ತೆ ಮೇಲೆ ಓಡಾಡುವ ಜನರಿಗೆ ತೊಂದರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 09, 2022 | 2:19 PM

ನೈಜೀರಿಯಾ, ಕಾಂಗೊ ಮತ್ತು ಇನ್ನೂ ಕೆಲ ರಾಷ್ಟ್ರಗಳ ಯುವಕರು ಸಾಯಂಕಾಲ 8 ಗಂಟಯಿಂದ ತಡರಾತ್ರಿವರೆಗೆ ಡ್ರಗ್ಸ್ ನಶೆಯಲ್ಲಿ ಇಲ್ಲವೇ ಅದನ್ನು ಮಾರುತ್ತಾ ಈ ಪ್ರದೇಶಗಳಲ್ಲಿ ಓಡಾಡುತ್ತಿರುತ್ತಾರೆ.

ಬೆಂಗಳೂರು:  ಇಲ್ಲೊಬ್ಬ ಆಫ್ರಿಕನ್ ದೇಶದ ಪ್ರಜೆ ನಡುರಸ್ತೇಲಿ ಡ್ಯಾನ್ಸ್ ಮಾಡುತ್ತಾ ವಾಹನಗಳ ಮೇಲೆ ಓಡಾಡುವವರಿಗೆ ಮತ್ತು ಪಾದಾಚಾರಿಗಳಿಗೆ ತೊಂದರೆ ಮಾಡುತ್ತಿದ್ದಾನೆ. ಕುಡಿತ ಇಲ್ಲವೇ ಡ್ರಗ್ಸ್ (drugs) ಅವನ್ನು ಹಾಗೆ ಮಾಡಿಸುತ್ತಿದೆ. ಇದು ಬಾಣಸವಾಡಿ (Banaswadi) ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಮುಖ್ಯ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಕಂಡು ಬಂದ ದೃಶ್ಯ. ಬಾಣಸವಾಡಿ, ಕಮ್ಮನಹಳ್ಳಿ (Kammanhalli) ಮತ್ತು ಕಲ್ಯಾಣನಗರ ಪ್ರದೇಶದಲ್ಲಿ ಆಫ್ರಿಕನ್ ದೇಶಗಳಿಂದ ಬೆಂಗಳೂರಿಗೆ ಓದಲು ಬಂದ ವಿದ್ಯಾರ್ಥಿಗಳಲ್ಲಿ ಕೆಲವರು ಡ್ರಗ್ ಪೆಡ್ಲರ್ ಗಳು ಎಂದು ಹೇಳಲಾಗುತ್ತದೆ. ನೈಜೀರಿಯಾ, ಕಾಂಗೊ ಮತ್ತು ಇನ್ನೂ ಕೆಲ ರಾಷ್ಟ್ರಗಳ ಯುವಕರು ಸಾಯಂಕಾಲ 8 ಗಂಟಯಿಂದ ತಡರಾತ್ರಿವರೆಗೆ ಡ್ರಗ್ಸ್ ನಶೆಯಲ್ಲಿ ಇಲ್ಲವೇ ಅದನ್ನು ಮಾರುತ್ತಾ ಈ ಪ್ರದೇಶಗಳಲ್ಲಿ ಓಡಾಡುತ್ತಿರುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.