ದಿನಕ್ಕೆ ಕೇವಲ 5 ಗಂಟೆ ನಿದ್ರಿಸುವ ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದರು ಯಡಿಯೂರಪ್ಪ

ದಿನಕ್ಕೆ ಕೇವಲ 5 ಗಂಟೆ ನಿದ್ರಿಸುವ ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದರು ಯಡಿಯೂರಪ್ಪ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 09, 2022 | 12:42 PM

ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದ ಮಹಿಳೆಯರಲ್ಲಿ ವಿಶೇಷ ಅರಿಕೆ ಮಾಡಿಕೊಂಡ ಯಡಿಯೂರಪ್ಪನವರು ಮೋದಿಯವರಿಗೆ ಸ್ತ್ರೀಯ ಮೇಲೆ ಅಧಿಕ ಗೌರವವಿದೆ ಅವರು ಕೂಡ ಬಿಜೆಪಿ ಅಭ್ಯರ್ಥಿಗಳಿಗೆ ವೋಟು ನೀಡಬೇಕೆಂದು ಕೋರಿದರು.

ವಿಜಯಪುರ:  ವಾಯುವ್ಯ ವಿಭಾಗದ ವಿಧಾನ ಪರಿಷತ್ ಚುನಾವಣೆಗೆ ಗುರುವಾರವೂ ವಿಜಯಪುರನಲ್ಲಿ ಪ್ರಚಾರ ಮುಂದುವರಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ಪಕ್ಷದ ಅಭ್ಯರ್ಥಿಗಳಗಾಗಿರುವ ಅರುಣ್ ಶಹಾಪುರ (Arun Shahapura) ಮತ್ತು ಹನುಮಂತ ನಿರಾಣಿ (Hanumantha Nirani) ಅವರಿಗೆ ಮತ ನೀಡಿ ಕಳೆದ 8 ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೆ ರಾತ್ರಿ 12 ಗಂಟೆವರೆಗೆ ದುಡಿದ ಬಳಿಕ ಮಲಗಿ 5 ಗಂಟೆಗೆಲ್ಲ ಎದ್ದು ಪುನಃ ಕೆಲಸದಲ್ಲಿ ತೊಡಗಿಕೊಳ್ಳುವ ಪ್ರಧಾನ ನರೇಂದ್ರ ಮೋದಿಯವರ ಕೈ ಮತ್ತಷ್ಟು ಬಲಪಡಿಸಬೇಕೆಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದ ಮಹಿಳೆಯರಲ್ಲಿ ವಿಶೇಷ ಅರಿಕೆ ಮಾಡಿಕೊಂಡ ಯಡಿಯೂರಪ್ಪನವರು ಮೋದಿಯವರಿಗೆ ಸ್ತ್ರೀಯ ಮೇಲೆ ಅಧಿಕ ಗೌರವವಿದೆ ಅವರು ಕೂಡ ಬಿಜೆಪಿ ಅಭ್ಯರ್ಥಿಗಳಿಗೆ ವೋಟು ನೀಡಬೇಕೆಂದು ಕೋರಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.