Mysuru; ಕಾಂಗ್ರೆಸ್ ನಾಯಕರ ಪಂಚೆ ಬಗ್ಗೆ ಮಾತಾಡೋದು ಬಿಟ್ಟು ಸಿಟಿ ರವಿ ಮೊದ್ಲು ತಮ್ಮ ಪಂಚೆ ಸರಿಮಾಡಿಕೊಳ್ಳಲಿ: ಎನ್ ಚಲುವರಾಯಸ್ವಾಮಿ
ವಿಧಾನ ಸಭಾ ಚುನಾವಣೆಯಲ್ಲಿ ಕೇವಲ 66 ಸೀಟು ಗೆದ್ದು ಬಿಜೆಪಿ ನಾಯಕರು ತಮ್ಮ ತಮ್ಮಲ್ಲಿ ಜಗಳವಾಡುತ್ತಿದ್ದಾರೆ ಎಂದು ಸಚಿವ ಹೇಳಿದರು.
ಮೈಸೂರು: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾ ಮಾಜಿ ಶಾಸಕ ಸಿಟಿ ರವಿ (CT Ravi) ಮಾಡಿದ ಪಂಚೆ ಕಾಮೆಂಟ್ ಗೆ ಖಡಕ್ ಉತ್ತರ ನೀಡಿದರು. ಕಾಂಗ್ರೆಸ್ ಪಕ್ಷದ ಪಂಚೆ ವಿಷಯ ಹಾಗಿರಲಿ, ಅವರು ಮೊದಲು ತಮ್ಮ ಪಂಚೆ ಸರಿಮಾಡಿಕೊಳ್ಳಲಿ, ಹೀಗೆ ಮಾತಾಡಿದ್ದಕ್ಕೆ ಜನ ಚೆನ್ನಾಗಿ ಪಾಠ ಕಲಿಸಿದ್ದಾರೆ ಆದರೂ ಬುದ್ಧಿ ಬಂದಿಲ್ಲ ಎಂದು ಸಚಿವ ಲೇವಡಿ ಮಾಡಿದರು. ವಿಧಾನ ಸಭಾ ಚುನಾವಣೆಯಲ್ಲಿ (Assembly polls) ಕೇವಲ 66 ಸೀಟು ಗೆದ್ದು ಬಿಜೆಪಿ ನಾಯಕರು ತಮ್ಮ ತಮ್ಮಲ್ಲಿ ಜಗಳವಾಡುತ್ತಿದ್ದಾರೆ. ಒಬ್ಬೊಬ್ಬ ನಾಯಕ ಒಂದೊಂದು ರೀತಿಯ ಹೇಳಿಕೆ ನೀಡುತ್ತಾನೆ, ಕಾಂಗ್ರೆಸ್ ಪಕ್ಷವನ್ನು ಅವರು ನೋಡಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅದ್ಭುತವಾದ ಸಮನ್ವತೆಯೊಂದಿಗೆ ಸರ್ಕಾರ ಮತ್ತು ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ