Cyclone Beeper Joy effect: ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಬೆಟ್ಟ ಕುಸಿಯುವ ಆತಂಕ
ಕಾಮಗಾರಿ ನಡೆಸುತ್ತಿರುವ ಐಆರ್ ಬಿ ಸಂಸ್ಥೆಯೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಮಂಕಾಳೆ ವೈದ್ಯ ಹೇಳಿದ್ದಾರೆ.
ಉತ್ತರ ಕನ್ನಡ: ಬೀಪರ್ ಜಾಯ್ ಚಂಡಮಾರುತದ (Beepr Joy Cyclone) ಪ್ರಭಾವಕ್ಕೆ ರಾಜ್ಯದ ಕರಾವಳಿ ಭಾಗ (coastal region) ಸಿಲುಕಿದ್ದು ಕಳೆದ 3-4 ದಿನಗಳಿಂದ ಜೋರು ಮಳೆಯಾಗುತ್ತಿದೆ. ಮಳೆ ಮತ್ತು ಚಂಡಮಾರುತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಅಸಲಿಗೆ ಈ ಹೆದ್ದಾರಿಯ ಅಗಲೀಕರಣಕ್ಕಾಗಿ ಹಲವಾರು ವರ್ಷಗಳಿಂದ ಬೆಟ್ಟಪ್ರದೇಶಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಕೊರೆಯಲಾಗುತ್ತಿದೆ ಮತ್ತು ಕಾಮಗಾರಿ ಕೂಡ ಪೂರ್ತಿಗೊಂಡಿಲ್ಲ. ಗುಡ್ಡಗಳ ಕೊರೆಯುವಿಕೆಯಿಂದಾಗಿ ಹಲವು ಭಾಗಗಲ್ಲಿ ಅವರು ಶಿಥಿಲಗೊಂಡಿದ್ದು ಬಿರುಗಾಳಿ ಮತ್ತು ಮಳೆಗೆ ಕುಸಿಯವ ಅಪಾಯ ಸೃಷ್ಟಿಯಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳೆ ವೈದ್ಯ (Mankale Vaidya) ಅವರ ಗಮನಕ್ಕೆ ವಿಷಯ ಬಂದಿದ್ದು ಕಾಮಗಾರಿ ನಡೆಸುತ್ತಿರುವ ಐಆರ್ ಬಿ ಸಂಸ್ಥೆಯೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ.