AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Free bus travel: ಉಚಿತ ಬಸ್ ಪ್ರಯಾಣ ಯೋಜನೆ ಜಾರಿ, ಎಲ್ಲ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆಯೇ ದೊಡ್ಡದು!

Free bus travel: ಉಚಿತ ಬಸ್ ಪ್ರಯಾಣ ಯೋಜನೆ ಜಾರಿ, ಎಲ್ಲ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆಯೇ ದೊಡ್ಡದು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 12, 2023 | 10:35 AM

ಕೇವಲ ಹಾಸನ ಮಾತ್ರವಲ್ಲ, ಬೇರೆ ಬೇರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು.

ಹಾಸನ: ರಾಜ್ಯದೆಲ್ಲೆಡೆ ಉಚಿತ ಬಸ್ ಪ್ರಯಾಣ ಯೋಜನೆಗೆ ನಿನ್ನೆಯಿಂದ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಇನ್ನೂ ಹಲವು ಸಚಿವರು, ಅಧಿಕಾರಿಗಳು ರವಿವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸ್ಕೀಮನ್ನು ಉದ್ಘಾಟಿಸಿದ್ದನ್ನು ನೀವು ಟಿವಿಗಳಲ್ಲಿ ನೋಡಿರುತ್ತೀರಿ. ನಿನ್ನೆ ರಜಾ ದಿನವಾಗಿದ್ದರಿಂದ ಹೆಚ್ಚು ಮಹಿಳೆಯರು ಬಸ್ ಗಳಲ್ಲಿ ಓಡಾಡಲಿಲ್ಲ ಅನ್ನೋದು ಸತ್ಯ. ಆದರೆ, ಇವತ್ತು ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪುರುಷರಿಗಿಂತ ಜಾಸ್ತಿ ಮಹಿಳೆಯರು ಕಾಣಿಸುತ್ತಿದ್ದರು. ಹಾಸನದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರ ದೊಡ್ಡ ಗುಂಪನ್ನು ಇಲ್ಲಿ ನೋಡಬಹುದು. ಕೇವಲ ಹಾಸನ ಮಾತ್ರವಲ್ಲ, ಬೇರೆ ಬೇರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ