ನೂತನ ಜೋಡಿ ಅಭಿ-ಅವಿವಾ ಜೊತೆ ಸಖತ್ ಸ್ಟೆಪ್ ಹಾಕಿದ ರಾಕಿಭಾಯ್

Yash: ಅಭಿಷೇಕ್ ಅಂಬರೀಶ್-ಅವಿವಾ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಯಶ್ ನೂತನ ಜೋಡಿಯೊಡನೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ.

Follow us
ಮಂಜುನಾಥ ಸಿ.
|

Updated on:Jun 11, 2023 | 10:54 PM

ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದ್ದಪ್ಪ (Aviva Bidappa) ವಿವಾಹದಲ್ಲಿ ಭಾಗವಹಿಸಿದ್ದ ನಟ ಯಶ್ (Yash). ಅವರ ಸಂಗೀತ್ ಪಾರ್ಟಿಯಲ್ಲಿ (Sangeeth Party) ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ. ಅಭಿಷೇಕ್-ಅವಿವಾ ಹಾಗೂ ಸುಮಲತಾ ಅಂಬರೀಶ್ ಅವರೊಟ್ಟಿಗೆ ಹಾಡಿ ಕುಣಿದು ಮಜಾ ಮಾಡಿದ್ದಾರೆ. ಅದರ ಜೊತೆಗೆ ಹೊಸ ಮದುವೆ ಗಂಡು ಅಭಿಷೇಕ್​ಗೆ ಕೆಲವು ಉಪಯುಕ್ತ ಸಲಹೆಗಳನ್ನು ಸಹ ನೀಡಿದ್ದಾರೆ. ಯಾರದ್ದೇ ಜಗಳವಾದರೂ ತಪ್ಪು ನಮ್ಮ ಹುಡುಗನದ್ದೇ ಆಗಿರುತ್ತದೆ ಎಂದಿದ್ದಾರೆ ಯಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Sun, 11 June 23