ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಬಸ್ನಲ್ಲಿ ಸಿಕ್ಕಿಬಿದ್ದಿದ್ದೇ ರೋಚಕ
ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ (Hindisgere village) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣದ (Manjula Murder Case) ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 1ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಹಂತಕ ಮಧುನನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ವಿಶೇಷ ಅಂದ್ರೆ ಪೊಲೀಸರೇ ಹೋಗಿ ಬಂಧಿಸಿಲ್ಲ. ಬಸ್ ಡ್ರೈವರ್ನಿಂದ ಆರೋಪಿಯನ್ನು ಲಾಕ್ ಮಾಡಿಸಿದ್ದಾರೆ. ಹಾಗಾದ್ರೆ, ಹಂತಕ ಮಧು ಎಲ್ಲಿಗೆ ಹೊರಟ್ಟಿದ್ದ? ಹೇಗೆ ಸಿಕ್ಕಿಬಿದ್ದ ಎನ್ನುವ ಮಾಹಿತಿಯನ್ನು ಎಸ್ಪಿಯವರು ಬಿಚ್ಚಿಟ್ಟಿದ್ದಾರೆ.
ತುಮಕೂರು, (ಡಿಸೆಂಬರ್ 04): ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ (Hindisgere village) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣದ (Manjula Murder Case) ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 1ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಹಂತಕ ಮಧುನನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ವಿಶೇಷ ಅಂದ್ರೆ ಪೊಲೀಸರೇ ಹೋಗಿ ಬಂಧಿಸಿಲ್ಲ. ಬಸ್ ಡ್ರೈವರ್ನಿಂದ ಆರೋಪಿಯನ್ನು ಲಾಕ್ ಮಾಡಿಸಿದ್ದಾರೆ. ಹಾಗಾದ್ರೆ, ಹಂತಕ ಮಧು ಎಲ್ಲಿಗೆ ಹೊರಟ್ಟಿದ್ದ? ಹೇಗೆ ಸಿಕ್ಕಿಬಿದ್ದ ಎನ್ನುವ ಮಾಹಿತಿಯನ್ನು ಎಸ್ಪಿಯವರು ಬಿಚ್ಚಿಟ್ಟಿದ್ದಾರೆ.
