ಮೈಸೂರಲ್ಲಿ ಹಿಂದೂ ಮುಸ್ಲಿಂ ಯುವಕರು ಜೊತೆಯಾಗಿ ಗೌರಿ-ಗಣೇಶ ಹಬ್ಬ ಆಚರಿಸಿದರು!

|

Updated on: Sep 18, 2023 | 6:53 PM

ಈ ಸೌಹಾರ್ದತೆ ಕೇವಲ ಹಬ್ಬ ಹರಿದಿನಗಳಿಗೆ ಸೀಮಿತವಾಗಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ. ವರ್ಷದ ಎಲ್ಲ ದಿನಗಳಲ್ಲಿ ಈ ಏರಿಯಾದ ಹಿಂದೂ ಮುಸಲ್ಮಾನರು ಹೀಗೆ ಪರಸ್ಪರ ಪ್ರೀತಿ-ವಿಶ್ವಾಸ ಗಳಿಂದ ಬದುಕಿದರೆ ಅದು ಬೇರೆ ಏರಿಯಾಗಳ ನಿವಾಸಿಗಳಿಗೂ ಮಾದರಿಯಾಗುತ್ತದೆ.

ಮೈಸೂರು: ಮೈಸೂರಿನ ಒಂದು ಭಾಗದಲ್ಲಿ ಗೌರಿ ಗಣೇಶ ಹಬ್ಬವನ್ನು (Gowri Ganesh Festival) ವಿಶಿಷ್ಟವಾದ ರೀತಿಯಲ್ಲಿ ಆಚರಿಸಿ ವಿನಾಯಕನನ್ನು ಪ್ರತಿಷ್ಠಾಪಿಸಲಾಯಿತು. ಈ ಆಚರಣೆಗೆ ಕೋಮು ಸೌಹಾರ್ದತೆಗೂ (communal harmony) ಸಾಕ್ಷಿಯಾಯಿತು ಅನ್ನೋದು ಸಹ ಅಷ್ಟೇ ಸತ್ಯ ಮಾರಾಯ್ರೇ. ವಿಡಿಯೋ ನೋಡಿದರೆ ವಿಷಯ ಏನು ಅಂತ ನಿಮಗೆ ಗೊತ್ತಾಗುತ್ತದೆ. ಗಣೇಶನ ಪ್ರತಿಷ್ಠಾಪನೆ (Ganesh installation) ಮತ್ತು ಪೂಜೆಯಲ್ಲಿ ಏರಿಯಾದ ಮುಸಲ್ಮಾನರು ಸಹ ಭಾಗಿಯಾದರು. ಹಿಂದೂ ಯುವಕರು ಮುಸಲ್ಮಾನರನ್ನು ಪೂಜೆಗೆ ಆಹ್ವಾನಿಸಿದ್ದು ಮತ್ತು ಮುಸಲ್ಮಾನ ಯುವಕರು ಅವರ ಆಹ್ವಾನವನ್ನು ಸ್ವೀಕರಿಸಿ ಪೂಜೆಗೆ ಹಾಜರಾಗಿದ್ದು ನಿಸ್ಸಂದೇಹವಾಗಿ ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುತ್ತಾರಲ್ಲ ಹಾಗೆ! ಈ ಸೌಹಾರ್ದತೆ ಕೇವಲ ಹಬ್ಬ ಹರಿದಿನಗಳಿಗೆ ಸೀಮಿತವಾಗಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ. ವರ್ಷದ ಎಲ್ಲ ದಿನಗಳಲ್ಲಿ ಈ ಏರಿಯಾದ ಹಿಂದೂ ಮುಸಲ್ಮಾನರು ಹೀಗೆ ಪರಸ್ಪರ ಪ್ರೀತಿ-ವಿಶ್ವಾಸ ಗಳಿಂದ ಬದುಕಿದರೆ ಅದು ಬೇರೆ ಏರಿಯಾಗಳ ನಿವಾಸಿಗಳಿಗೂ ಮಾದರಿಯಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ