ಬಾಂಗ್ಲಾದೇಶ: ಪೊಲೀಸ್​ ಠಾಣೆಯೊಳಗೆ ಹಿಂದೂ ಹುಡುಗನ ಮೇಲೆ ಮುಸ್ಲಿಂ ಗುಂಪಿನಿಂದ ಹಲ್ಲೆ

|

Updated on: Sep 06, 2024 | 10:52 AM

ಬಾಂಗ್ಲಾದೇಶದಲ್ಲಿ ಪೊಲೀಸ್​ ಠಾಣೆ ಒಳಗೆ ಮುಸ್ಲಿಂ ಗುಂಪು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಬಾಂಗ್ಲಾದೇಶದ 15 ವರ್ಷ ಹಿಂದೂ ಬಾಲಕ ಉತ್ಸವ್ ಮಂಡಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಗುಂಪೊಂದು ಪೊಲೀಸ್​ ಠಾಣೆಯೊಳಗೆ ಅಮಾನುಷವಾಗಿ ಥಳಿಸಿದೆ.

ಖುಲ್ನಾದ ಸೋನದಂಗ ವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಉತ್ಸವ್ ಜೀವಂತವಾಗಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಇಸ್ಲಾಂ ತಿಳಿಸಿದ್ದಾರೆ. ಪ್ರವಾದಿಯವರ ಕುರಿತು ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮದರಸಾ ವಿದ್ಯಾರ್ಥಿಗಳ ಗುಂಪು ಉತ್ಸವ್​ನನ್ನು ಪೊಲೀಸ್ ಠಾಣೆಗೆ ಕರೆತಂದಾಗ ಈ ಘಟನೆ ರಾತ್ರಿ 11.45 ರ ಸುಮಾರಿಗೆ ಸಂಭವಿಸಿದೆ.

ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಇಮಾಮ್ ಅಸೋಸಿಯೇಶನ್‌ನ ಸದಸ್ಯರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದರಿಂದ ಉದ್ವಿಗ್ನತೆ ಉಲ್ಬಣಗೊಂಡಿತು, ಬಾಲಕನಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿತು.
ತೀವ್ರವಾಗಿ ಗಾಯಗೊಂಡಿದ್ದ ಉತ್ಸವ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸೇನಾ ಸಿಬ್ಬಂದಿ ಅಂತಿಮವಾಗಿ ಕರೆದೊಯ್ದರು.

ಸೇನಾ ಆಸ್ಪತ್ರೆಯಲ್ಲಿ ಉತ್ಸವ್ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು. ಆತನ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 06, 2024 10:51 AM